ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ಷೇತ್ರ ಪುರಾಣ ಇತಿಹಾಸವನ್ನು ಸಂಗ್ರಹಿಸಿ ರಂಗದಲ್ಲಿ ಸಾಕ್ಷಾತ್ಕಾರಗೊಂಡಾಗ ಕ್ಷೇತ್ರದ ಮಹಿಮೆ ಸಾರುವ ಜೊತೆಗೆ ನಮ್ಮ ಕಲೆ ಮತ್ತು ಸಂಸ್ಕೃತಿ ಭದ್ರವಾಗಿ ನೆಲೆಗೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಶ್ಲಾಘನೀಯ ಎಂದು ಡಾ.ರಾಜೇಶ್ ಕುಮಾರ ಶೆಟ್ಟಿ ಹೇಳಿದರು.
ಅವರು ಕಾಳಾವರ ಶ್ರೀ ದೇವಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹರಿದಾಸ ಕೆ.ಕೆ.ಕಾಳಾವರ್‌ಕಾರ್ ಅವರ ಕಥಾ ಚಿಂತನ‘ ಸಂಧ್ಯಾಶ್ರಯ’ ಮತ್ತು ಅವರು ರಚಿಸಿದ ಕಚ್ಚೂರು ಶ್ರೀ ಮಾಲ್ತಿ ದೇವಿ ಮಹಿಮೆ ಯಕ್ಷಗಾನ ಕೃತಿ ಬಿಡುಗಡೆ ಮತ್ತು ಪ್ರದರ್ಶನದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಉಪನ್ಯಾಸಕ ಸುಧಾಕರ ವಕ್ವಾಡಿ ಪ್ರಸಂಗ ಪ್ರದರ್ಶನ ಉದ್ಘಾಟಿಸಿದರು. ಕುಂದಾಪುರದ ವಕೀಲರಾದ ಸತೀಶ್ಚಂದ್ರ ಕಾಳಾವರ್‌ಕಾರ್ ಪ್ರಸಂಗ ಕೃತಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಹಟ್ಟಿಯಂಗಡಿ ಮೇಳದ ಯಜಮಾನ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ, ವಾದ್ಯ ವೃಂದ ಕಲಾತಂಡದ ಮಂಜುನಾಥ ದೇವಾಡಿಗ ಪ್ರಸಂಗ ಕರ್ತ ಹರಿದಾಸ್.ಕೆ.ಕೆ ಕಾಳಾವರ್‌ಕಾರ್ ಇವರನ್ನು ಊರಿನ ನಾಗರಿಕರು ಮತ್ತು ಮೇಳದ ವತಿಯಿಂದ ಸನ್ಮಾನಿಸಲಾಯಿತು. ಕೆ.ಕೆ.ಕಾಳಾವರ್‌ಕಾರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಂದೂರು ರತ್ತು ಬಾ ಶಾಲಾ ಮುಖ್ಯ ಶಿಕ್ಷಕ ಮಂಜು ಕಾಳಾವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಬಿಡುಗಡೆಗೊಂಡ ಕಚ್ಚೂರು ಮಾಲ್ತಿದೇವಿ ಮಹಿಮೆ ಪ್ರಸಂಗವನ್ನು ಶ್ರೀ ಹಟ್ಟಿಯಂಗಡಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅದ್ಧೂರಿಯಾಗಿ ಪ್ರದರ್ಶನ ನಡೆಯಿತು.