Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸಿಯಾಳಾಭಿಷೇಕ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಲೋಕಕಲ್ಯಾಣಾರ್ಥವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಅಮ್ಮನವರಿಗೆ ಶುಕ್ರವಾರ ಗಜಾನನ ಜೋಶಿ ನೇತೃತ್ವದಲ್ಲಿ ಸಾಮೂಹಿಕ ಸಿಯಾಳಾಭಿಷೇಕ ನಡೆಯಿತು.

ರಾಷ್ಟ್ರದ ಪ್ರಜೆಗಳು ಸದಾ ಸುಖ, ಸಂತೋಷ, ನೆಮ್ಮದಿ ಹಾಗೂ ಪರಸ್ಪರ ಸಹಬಾಳ್ವೆಯೊಂದಿಗೆ ಬಾಳುವಂತಾಗಬೇಕು. ಕಾಲಕ್ಕೆ ತಕ್ಕಂತೆ ಮಳೆ-ಬೆಳೆಯಾಗಬೇಕು. ದೇಶ ಇನ್ನಷ್ಟು ಸಧೃಡವಾಗಬೇಕೆಂಬ ಸಂಕಲ್ಪದೊಂದಿಗೆ ಬೆಳಿಗ್ಗೆ ಶ್ರೀ ಮೂಕಾಂಬಿಯಲ್ಲಿ ಪ್ರಾರ್ಥಿಸಿ ಎರಡನೇ ವರ್ಷದ ವಿಶೇಷ ಸೇವಾ ಕಾರ್ಯಕ್ರಮ ಆರಂಭಗೊಂಡಿತು. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಿಯಾಳಗಳ ಅಭಿಷೇಕ ಜತೆಗೆ ಕ್ಷೀರ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಯಿತು. ಅಲ್ಲದೇ ಗುಡಾನ್ನ, ಕ್ಷೀರಾನ್ನ ನೈವೇದ್ಯ, ಶತರುದ್ರಾಭಿಷೇಕ, ವಸ್ತ್ರ, ಫಲ-ಪುಷ್ಪಗಳ ಸಮರ್ಪಣೆಯೂ ಜರುಗಿತು. ದೇವರಿಗೆ ಮಲ್ಲಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಊರ, ಪರವೂರ ಅನೇಕ ಭಕ್ತರು ಈ ವಿಶೇಷ ದಿನವನ್ನು ಕಣ್ತುಂಬಿಕೊಂಡು ಕೃತಾರ್ತರಾದರು.

 

Exit mobile version