Site icon Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿ ವಿಜೇತ ಜ್ಯೋತಿ ಶೇರುಗಾರ್‌ಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಉಡುಪಿ ಜಿಲ್ಲಾ ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿ ವಿಜೇತ ಗಂಗೊಳ್ಳಿಯ ಕಲ್ಪನಾ ಯಾನೆ ಜ್ಯೋತಿ ಶೇರುಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗುರುವಾರ ಜರಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಅವರನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಸನ್ಮಾನಿಸಿ ಗೌರವಿಸಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅಂಜಲಿ ಹುಂಡೇಕರ್, ಗ್ರಾಪಂ ಸದಸ್ಯ, ಮಕ್ಕಳ ಮಿತ್ರ ಬಿ.ಲಕ್ಷ್ಮೀಕಾಂತ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಹಿಳಾ ಮಿತ್ರ ಫಿಲೋಮಿನಾ ಫೆರ್ನಾಂಡಿಸ್, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿ ಅರ್ಪಿತಾ, ಗ್ರಾಪಂ ಸದಸ್ಯರಾದ ಅಬ್ದುಲ್ ಹಾದಿ, ಸರೋಜಿನಿ ಕೋಡಿಕಾರ್, ಶಾರದಾ ಶೇರುಗಾರ್, ರೋಜಿ ಫೆರ್ನಾಂಡಿಸ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ, ನಮ್ಮ ಭೂಮಿ ಸಂಸ್ಥೆಯ ಶಾರದಾ, ಪಂಚಾಯತ್ ಸಿಬ್ಬಂದಿಗಳಾದ ನಾರಾಯಣ ಶ್ಯಾನುಭಾಗ್, ಸಂದೀಪ ಖಾರ್ವಿ, ಮಕ್ಕಳ ಮಿತ್ರರು ಮತ್ತಿತರರು ಉಪಸ್ಥಿತರಿದ್ದರು.

 

Exit mobile version