ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ಆಶ್ರಯದಲ್ಲಿ ನಾಗೂರು ಶ್ರೀ ಕೃಷ್ಣ ಲಲಿತಾ ಕಲಾಮಂದಿರದಲ್ಲಿ ಪಂಚಾಂಗ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮ ಆದಿತ್ಯವಾರ ದಿನ ಜರಗಿತು.
ಪಂಚಾಂಗ ಪಠಣ ಮಾಡಿ ಧಾರ್ಮಿಕ ಉಪನ್ಯಾಸ ನೀಡಿದ ವೇದಮೂರ್ತಿ ವಾಸುದೇವ ಐತಾಳ್ ಕೆಳಮಠ ಮಾತನಾಡಿ ಜ್ಯೋತಿಷ್ಯ ಶಾಸ್ತ್ರವು ವೈಜ್ಞಾನಿಕತೆಯಿಂದ ಕೂಡಿದು ಸತ್ಯವಾಗಿರುತ್ತದೆ. ಜ್ಯೋತಿಷಿ ಶಾಸ್ತ್ರ ಹೆಚ್ಚಿನ ವಿಜ್ಞಾನಿಗಳು ಸಹ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಪಂಚಾಗವು ಸಹ ಸಂಪೂರ್ಣ ಗಣಿತದ ಲೆಕ್ಕ ಚಾರದಿಂದ ರಚಿತವಾಗಿರುತ್ತದೆ. ಧಾರ್ಮಿಕವಾಗಿ ಪಂಚಾಂಗ ಶೃವಣ ಮಾಡುವುದರಿಂದ ಪುಣ್ಯಾಂಶ ಲಭಿಸುತ್ತದೆ. ಎಂದು ಶಾಸ್ತ್ರಕಾರರು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದರು.
ಉಪ್ಪುಂದ ವಲಯದ ಅಧ್ಯಕ್ಷರಾದ ಬಿ. ವಿಶ್ವೇಶ್ವರ ಅಡಿಗ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಪ್ರಮುಖರಾದ ಉದ್ಯಮಿ ಉಮೇಶ ಶ್ಯಾನುಬೋಗ್ ಗೌರವಧ್ಯಕ್ಷ ಮಂಜುನಾಥ್ ಉಡುಪ, ದೀಟಿ ಸೀತರಾಮ ಮಯ್ಯ, ವಾಸು ದೇವ ನಾವುಡ, ಪ್ರಕಾಶ ಐತಾಳ್, ವಾಸುದೇವ ಕಾರಂತ, ರಮೇಶ ವೈದ್ಯ, ಗಣೇಶ ಕಾರಂತ, ಕಾರ್ಯದರ್ಶಿ ರತ್ನಕರ ಉಡುಪ, ಮಹಿಳಾ ವೇದಿಕೆ ಅಧ್ಯಕ್ಷೆ ಸುಮಂಗಲಾ ಕಾರಂತ್, ಯುವ ವೇದಿಕೆ ಅಧ್ಯಕ್ಷ ಪ್ರಶಂತ ಮಯ್ಯ, ಪ್ರಭಾಕರ ಮೆರ್ಟಾ ಅರುಣ್ ಶ್ಯಾನುಬೋಗ್, ಯು. ಸಂದೇಶ ಭಟ್, ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಸದಸ್ಯರಿಂದ ಶ್ರೀ ವಿಷ್ಣು ಸಹಸ್ರನಾಮ ಸಾಮೂಹಿಕ ಪಠಣ ಮಾಡಲಾಯಿತು. ರತ್ನಾಂಶ ಉಡುಪ ಒಡೆಯರಮಠ ಆತಿಥ್ಯದ ವ್ಯವಸ್ಥೆ ಮಾಡಿದ್ದರು.
ಹೆಚ್. ಜಗದೀಶ್ ರಾವ್ ಸ್ವಾಗತಿಸಿದ್ದರು, ಗುರುರಾಜ್ ಹೆಬ್ಬಾರ್ ವಂದಿಸಿದರು, ಪ್ರಶಾಂತ ಮಯ್ಯ ಕಾರ್ಯಕ್ರಮ ನಿರೂಪಿಸಿದ್ದರು.