ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಉಪ್ಪಿನಕುದ್ರು ಗೊಂಬೆ ಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ ಕುಮಾರಿ ಕೃತಿಕಾ ಶೆಣೈ ಕುಂದಾಪುರ ಇವರ ಸುಗಮ ಸಂಗೀತ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಇತ್ತೀಚೆಗೆ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್, ತಲ್ಲೂರು ಸುರೇಶ್, ಸಂತೋಷ್ ಕೋಣಿ, ವಸಂತಿ ಆರ್. ಪಂಡಿತ್, ವಸುಮತಿ ಪುರಾಣಿಕ್, ರಜನಿ ಪ್ರಭುರವರು ಉಪಸ್ಥಿತರಿದ್ದರು. ಕೃತಿಕಾ ಶೆಣೈ ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಉಪ್ಪಿನಕುದ್ರು ದಿನೇಶ್ ದೇವಾಡಿಗ ಹಾಗೂ ತಂಡದವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ತದನಂತರ ಕೃತಿಕಾ ಶೆಣೈ ಯವರ ಸುಮಧುರ ಸಂಗೀತ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದ್ದರು.