Site icon Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್‌ಕಾರ‍್ಸ್ ಕಾಲೇಜು ವಾರ್ಷಿಕೋತ್ಸವ: ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅದ್ಯಕ್ಷರಾದ ರಾಜೀವ ಶೆಟ್ಟಿ ಮಾತನಾಡಿ, ಮೊದಲು ಜೀವನವೆಂಬ ಪರೀಕ್ಷೆಯಲ್ಲಿ ಪಾಸಾಗುವುದರೊಂದಿಗೆ ಮಾನವೀಯರಾಗಬೇಕು. ಇಂದಿನ ಗ್ರಾಮೀಣ ಭಾರತದ ಕನಸು ನನಸಾಗಬೇಕಿದ್ದರೆ ವಿದ್ಯಾವಂತರೆನಿಸಿಕೊಂಡವರು ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು. ತಮ್ಮ ಜ್ಞಾನದ ನೆಲೆಗಳನ್ನು ಬಳಸಿಕೊಂಡು ಉತ್ತಮ ಮಾನವ ಸಂಪನ್ಮೂಲಗಳಾಗಿ ದೇಶಕ್ಕೆ ಆಸ್ತಿಯಾಗಬೇಕು.ಇದಕ್ಕೆಲ್ಲ ಇಚ್ಛಾಶಕ್ತಿ. ನಿಶ್ಚಿತ ಗುರಿಸಾಧನೆ ಸಾಧಿಸುವ ಛಲ ಮತ್ತು ಒಳ್ಳೆಯ ಸಂಸ್ಕಾರಗನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಕ್ಕೆ ಸಮಾಜಕ್ಕೆ ಕೊಡುಗೆಯಾಗಿರಬೇಕು. ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಅರುಣಾಚಲ ಮಯ್ಯ ಉಪಸ್ಥಿತರಿದ್ದರು.

 

Exit mobile version