Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಂಡಾರ್‌ಕಾರ‍್ಸ್ ಕಾಲೇಜಿನಲಿ ನಡೆದ ವಾರ್ಷಿಕೋತ್ಸವದಲ್ಲಿ ಮಂಗಳೂರು ವಿವಿ ಮಟ್ಟದಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜ್ ಆಡಳಿತ ಮಂಡಳಿ ಅಧ್ಯಕ ಡಾ.ಎಚ್.ಶಾಂತರಾಮ್‌ಅಧ್ಯಕ್ಷತೆ ವಹಿಸಿದ್ದರು.ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತರಾಮ್ ಪ್ರಭು, ರಾಜೇಂದ್ರ ತೋಳಾರ್, ಕೆ.ಪ್ರಜ್ಞೇಶ್ ಪ್ರಭು, ಕೆ.ದೇವದಾಸ್‌ಕಾಮತ್ ಉಪಸ್ಥಿತರಿದ್ದರು.

ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ಪ್ರಾಧ್ಯಾಪಕ ಪ್ರೊ.ಉದಯಕುಮಾರ್, ಡಾ.ಪಾರ್ವತಿ ಜಿ. ಐತಾಳ್, ಪ್ರೊ.ನಾರಾಯಣತಂತ್ರಿ, ಪ್ರೊ.ಜಿ.ಎಸ್. ಹೆಗಡೆ, ಹಾಗೂ ಬೋಧಕೇತರ ಸಿಬಂದಿ ಸರಸ್ವತಿ ಬಾಯಿ ಅವರನ್ನು ಸಮ್ಮಾನಿಸಲಾಯಿತು.ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ವಿಜೇತರಾದ ಶಾಂಭವಿ, ಸಂಧ್ಯಾ, ಸಂಗೀತಾ ಯ.ಎಸ್.ಶೆಣೈ, ರಜನಿ ಹಾಗೂ ಕಾರ್ತಿಕ್ ಕಾಮತ್ ಅವರನ್ನು ಗೌರವಿಸಲಾಯಿತು.

ವಿಶ್ವಸ್ಥ ಮಂಡಳಿ ಸದಸ್ಯ ಸದಾನಂದಛಾತ್ರ ಸ್ವಾಗತಿಸಿದರು.ಪ್ರಾಂಶುಪಾಲ ಡಾ.ಎನ್. ಪಿ.ನಾರಾಯಣ ಶೆಟ್ಟಿ ವರದಿ ವಾಚಿಸಿದರು.ಉಪನ್ಯಾಸಕ ಹಯವಧನ ಉಪಾಧ್ಯಾಯ ಸಮ್ಮಾನಿತರ ವಿವರ ನೀಡಿದರು. ವಿದ್ಯಾರ್ಥಿನಿಯರಾದ ವಿನಯಾ ಶೆಟ್ಟಿ ಪರಿಚಯಿಸಿದರು. ಮಹಾಲಕ್ಷ್ಮಿ ಕಾರ‍್ಯಕ್ರಮ ನಿರ್ವಹಿಸಿದರು.ಉಪನ್ಯಾಸಕಿ ರೋಹಿಣಿ ವಂದಿಸಿದರು.

 

Exit mobile version