Site icon Kundapra.com ಕುಂದಾಪ್ರ ಡಾಟ್ ಕಾಂ

ಮನವಿ: ಕಣ್ಣಿನ ಕ್ಯಾನ್ಸರ್‌ಪೀಡಿತ ಬಾಲಕನಿಗೆ ಮಾನವೀಯ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೂಲಿ ಕೆಲಸಕ್ಕಾಗಿ ಹಾವೇರಿಯಿಂದ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮಕ್ಕೆ ಬಂದು ನೆಲೆಸಿದ ಯಲ್ಲಪ್ಪಾ ಬಿ. ಅಗಡಿ ಮತ್ತು ಈರಮ್ಮ ದಂಪತಿಯ ಏಕೈಕ ಪುತ್ರ ಹರೀಶ್(2) ಕಣ್ಣಿನ ಕ್ಯಾನ್ಸರ್‌ಗೆ ತುತ್ತಾಗಿದ್ದಾನೆ. ತೀರಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಈ ಬಡ ಕುಟುಂಬಕ್ಕೆ ಮಗುವಿನ ಕಾಯಿಲೆಯ ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಭರಿಸುವುದೇ ದೊಡ್ಡ ಚಿಂತೆಯಾಗಿದ್ದು, ದಾನಿಗಳು ಹಾಗೂ ಸಾರ್ವಜನಿಕರ ಮಾನವೀಯ ನೆರವಿಗಾಗಿ ದಂಪತಿ ಮನವಿ ಮಾಡಿಕೊಂಡಿದ್ದಾರೆ.

ಸೇನಾಪುರ ರೈಲ್ವೇ ನಿಲ್ದಾಣದ ಸಮೀಪ ಜೋಪಡಿಯಲ್ಲಿ ಹಾವೇರಿಯ ಹಲವು ಕೂಲಿಕಾರ್ಮಿಕ ಮಂದಿ ಜೊತೆ ವಾಸವಾಗಿರುವ ಯಲ್ಲಪ್ಪಾ ಬಿ. ಅಗಡಿ ದಂಪತಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಸಂಸಾರ ಸಾಗಿಸುತ್ತಾರೆ. ಇದೀಗ ಅವರ ಪುತ್ರ ಹರೀಶ್ ಎಡಗಣ್ಣಿಗೆ ಕ್ಯಾನ್ಸರ್ ಬಾಧಿಸಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಲಕ್ಷಾಂತರ ರೂ. ಅಗತ್ಯವಾಗಿದ್ದು, ಬಡ ಕುಟುಂಬ ಕಂಗಾಲಾಗಿದೆ.

ಆದ್ದರಿಂದ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ದಾನಿಗಳು ಹಾಗೂ ಸಾರ್ವಜನಿಕರು ಉದಾರ ಮನಸ್ಸಿನಿಂದ ಧನಸಹಾಯ ಮಾಡಿದ್ದಲ್ಲಿ ಮಗುವಿನ ಚಿಕಿತ್ಸೆಗೆ ನೆರವಾಗುತ್ತದೆ. ಸಹಾಯ ಮಾಡಲಿಚ್ಛಿಸುವವರು ಯಲ್ಲಪ್ಪಾ ಬಿ. ಅಗಡಿ ಅವರ ಹೆಸರಿನಲ್ಲಿ ಅಗಡಿಯ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ತೆರೆಯಲಾದ ಉಳಿತಾಯ ಖಾತೆ ಸಂಖ್ಯೆ 3052500113882801 (ಐಎಫ್‌ಎಸ್‌ಸಿ ಕೆಎಆರ್‌ಬಿ0000305) ಕ್ಕೆ ಸಲ್ಲಿಸುವಂತೆ ವಿನಂತಿಸಿದ್ದಾರೆ.

 

Exit mobile version