ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಅಭಿಮಾನಿಯೋರ್ವ ಅಭಿಮಾನದಿಂದ ನೀಡಿದ ಬೆಲೆ ಬಾಳುವ ಚಿನ್ನದ ಶೂ ಅನ್ನು ಖ್ಯಾತ ಪುಟ್‌ಬಾಲ್ ಆಟಗಾರ ರೋನಾಲ್ಡ್ ಅವರು ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ಎಚ್. ಐ.ವಿ ಪೀಡಿತರ ಕಲ್ಯಾಣಕ್ಕೆ ಬಳಸಿದರು. ಅವರ ಶ್ಲಾಘನೀಯ ಸೇವಾ ಮನೋಭಾವವನ್ನು ಜಗತ್ತು ಕೊಂಡಾಡಿತು. ಇದೇ ರೀತಿಯಲ್ಲಿ ಸೇವೆ ಮಾಡಲು ನೂರಾರು ಅವಕಾಶಗಳು ನಮಗೂ ಸಿಗಬಹುದು. ಅದು ಚಿಕ್ಕದಿರಲಿ ದೊಡ್ಡದಿರಲಿ ನಮ್ಮಲ್ಲಿರುವ ತ್ಯಾಗ ಮನೋಭಾವವೇ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವುದು ಆದುದರಿಂದ ಪ್ರತಿಯೊಬ್ಬರು ಸೇವಾ ಭಾವವನ್ನು ಅಳವಡಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳೋಣ ಎಂದು ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಜಿ.ಎನ್ ಪ್ರಕಾಶ್ ಹೇಳಿದರು.ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸ್ಥಳೀಯ ಆಶೀರ್ವಾದ ಹಾಲ್‌ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಗಣೇಶ್ ಐತಾಳ್ ವಹಿಸಿದ್ದರು. ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ.ಕಾಂಚನ್ ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿದರು. ಜೋನಲ್ ಲೆಫ್ಟಿನೆಂಟ್ ಮನೋಜ್ ನಾಯರ್, ಕ್ಲಬ್ ಕಾರ್ಯದರ್ಶಿ ಮಹಮ್ಮದ್ ಅಶ್ಪಕ್ ಉಪಸ್ಥಿತರಿದ್ದರು. 2018 -19 ನೇ ಸಾಲಿನ ಅಸಿಸ್ಟೆಂಟ್ ಗವರ್ನರ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಚರಣ ನಾವಡ ವಂದಿಸಿದರು.