Kundapra.com ಕುಂದಾಪ್ರ ಡಾಟ್ ಕಾಂ

ಸಮಾಜಸೇವಕ ವಿ.ವಾಸುದೇವ ಹಂದೆಯವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಇಲ್ಲಿನ ಸೋಶಿಯಲ್ ಸ್ಪೋರ್ಟ್ಸ್ ಎಂಡ್ ಚಾರಿಟೇಬಲ್ ಅಸೋಸಿಯೇಶನ್ ವತಿಯಿಂದ ಕುಂದಾಪುರದ ಸಮಾಜಸೇವಕ ವಿ.ವಾಸುದೇವ ಹಂದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗಂಗೊಳ್ಳಿ ಜಾಮೀಯಾ ಮೊಹಲ್ಲಾದ ವಂಟಿ ಕಂಪೌಂಡ್‌ನಲ್ಲಿ ಗುರುವಾರ ಜರಗಿದ ಸೋಶಿಯಲ್ ಸ್ಪೋರ್ಟ್ಸ್ ಎಂಡ್ ಚಾರಿಟೇಬಲ್ ಅಸೋಸಿಯೇಶನ್‌ನ 3ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋವಾದ ಮತ್ಸ್ಯೋದ್ಯಮಿ ಮೌಲಾನಾ ಇಬ್ರಾಹಿಂ ಸಾಹೇಬ್ ಅವರು ವಿ.ವಾಸುದೇವ ಹಂದೆ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕಿರಿಮಂಜೇಶ್ವರ ಪೇಶ್ ಇಮಾಮ್ ಜುಮ್ಮಾ ಮಸೀದಿಯ ಮೌಲಾನಾ ಜಮೀಕ್ ರಶದಿ, ನಾಗೂರು ಪೇಶ್ ಇಮಾಮ್ ಮೌಲಾನಾ ಮೀರಾ ಸಾಹೇಬ್ ನದ್ವಿ, ಗಂಗೊಳ್ಳಿ ಫಾತಿಮಾ ತುಜ್ ಜಹರಾ ಮದ್ರಸಾ ಮುಖ್ಯಸ್ಥ ಮೌಲಾನಾ ಮತಿನ್ ಸಿದ್ಧಿಕಿ, ಎಸ್‌ಡಿಪಿಐ ಗಂಗೊಳ್ಳಿ ಘಟಕದ ಅಧ್ಯಕ್ಷ ತಬ್ರೇಜ್ ಖಲೀಫೆ, ಅಬು ಮೊಹಮ್ಮದ್, ಖಾಜಿ ಅಶ್ರಫ್, ಗಂಗೊಳ್ಳಿ ಜಮಾತುಲ್ ಮುಸ್ಲಿಮಿನ್ ಕಾರ್ಯದರ್ಶಿ ಅಬ್ದುಲ್ ರಹೀಮ್, ಉಮ್ಮರ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.

 

Exit mobile version