ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ಬಾರ್ ಅಸೋಸಿಯೇಶನ್ ರಿ. ಕುಂದಾಪುರ ಇದರ ವತಿಯಿಂದ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪೂರ್ಣಚಂದ್ರ ಎಲ್ ಪುರಾಣಿಕರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ನೆರವೇರಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸದ್ರ ನ್ಯಾಯಾದೀಶರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಮಾಡುವ ಸಾಧನೆಗಳು ಮುಂದೆ ನಮ್ಮನ್ನು ಉನ್ನತ ಹುದ್ದೆ ಮತ್ತು ಸ್ಥಾನ ಮಾನಗಳು ಲಭಿಸಲು ಸಾದ್ಯವಾಗುತ್ತೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಸಲ್ವಾಡಿ ನಿರಂಜನ್ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸದ್ರ ನ್ಯಾಯಾದೀಶರಾದ ಪ್ರಕಾಶ ಖಂಡೇರಿ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾದೀಶರಾದ ಡಿಪಿ ಕುಮಾರ ಸ್ವಾಮಿ, 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾದೀಶರಾದ ಚಂದ್ರಶೇಖರ್ ಬಣ್ಕರ್ ಉಪಸ್ಥಿತರಿದ್ದರು.
ರವಿಕಿರಣ ಮುರ್ಡೇಶ್ವರ ಅಭಿನಂದನಾ ಭಾಷಣ ಮಾಡಿದರು, ಶ್ರೀಕಾಂತ್ ಆರ್ಡಿ ಅಭಿನಂದನಾ ಪತ್ರ ವಾಚಿಸಿದರು, ಶರತ್ ಶಟ್ಟಿ ಸ್ವಾಗತಿಸಿ, ರಮೇಶ್ ಹತ್ವಾಲ್ ಕಾರ್ಯಕ್ರಮ ನಿರೂಪಿಸಿದರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹೆಚ್ ಪ್ರಮೋದ ಹಂದೆ ವಂದಿಸಿದರು.