Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಖಂಡ ಭಜನಾ ಮಹೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿ ನಿನಾದ ಸಂಸ್ಥೆಯ ವತಿಯಿಂದ ಜರಗಿದ ಚಾತುರ್ಮಾಸ್ಯಾವಧಿ ಅಖಂಡ ಭಜನಾ ಮಹೋತ್ಸವ ಸವಿನೆನಪಿಗಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ 11 ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನ ಮೂಲಕ ಚಾಲನೆ ನೀಡಲಾಯಿತು.

ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ದೀಪ ಪ್ರಜ್ವಲಟಿ ಮಾಡುವ ಮೂಲಕ ಏಕಾಹ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿನಿಧಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಜಿ.ಶೇಷಗಿರಿ ನಾಯಕ್, ಎಚ್.ಸಂಜೀವ ನಾಯಕ್, ಬಿ.ಪ್ರಕಾಶ ಶೆಣೈ, ಜಿ.ಗಣಪತಿ ನಾಯಕ್, ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ, ಕಾರ್ಯದರ್ಶಿ ಎನ್.ಗಜಾನನ ನಾಯಕ್, ಎಂ.ನಾಗೇಂದ್ರ ಪೈ, ಎನ್.ಕೃಷ್ಣಾನಂದ ನಾಯಕ್, ವನಮಾಲಾ ಶೆಣೈ, ಎನ್.ಕೀರ್ತನಾ ಎಸ್. ನಾಯಕ್, ಎಂ.ಭಾನುಶ್ರೀ ಎಸ್.ಪೈ ಮತ್ತಿತರರು ಉಪಸ್ಥಿತರಿದ್ದರು. ಎ.೧೮ರಂದು ಬೆಳಿಗ್ಗೆ ದೀಪ ವಿಸರ್ಜನೆಯೊಂದಿಗೆ ಏಕಾಹ ಭಜನೆ ಸಂಪನ್ನಗೊಳ್ಳಲಿದೆ.

 

Exit mobile version