ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವಿಧಾನ ಸಭಾಕ್ಷೇತ್ರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ಚುನಾವಣೆ ಅಧಿಕಾರಿ ಕಚೇರಿಯಲ್ಲಿ ಕಳೆದ ಬಾರಿಯಂತೆ ಸಿಂಪಲ್ಲಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸೂಚಕರೊಂದಿಗೆ ಮಧ್ಯಾಹ್ನ 12ಕ್ಕೆ ಚುನಾವಣೆ ಅಧಿಕಾರಿ ಕಚೇರಿಗೆ ಆಗಮಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಅವರಿಗೆಮೂರು ಸೆಟ್ ನಾಮಪತ್ರ ಸಲ್ಲಿಸಿದರು. ಮೊದಲೆರಡು ಚುವಾವಣೆಯಲ್ಲಿಅದ್ದೂರಿಯಾಗಿ ನಾಮಪತ್ರ ಸಲ್ಲಿಸಿದ ಹಾಲಾಡಿ ಕಳೆದ ಬಾರಿ ಪಕ್ಷೇತರರಾಗಿ ಸಿಂಪಲ್ಲ್ಲಾಗಿ ನಾಮಪತ್ರ ಸಲ್ಲಿಸಿದ್ದು, ಈ ಬಾರಿ ಕೂಡಾ ಆಡಂಬರವಿಲ್ಲದೆ ನಾಮಪತ್ರ ಸಲ್ಲಿಸಿದರು.
ನ್ಯಾಯವಾದಿ ಟಿ.ಬಿ. ಶೆಟ್ಟಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷಕಾಡೂರು ಸುರೇಶ ಶೆಟ್ಟಿ, ಕುಂದಾಪುರತಾಪಂ ಮಾಜಿ ಸದಸ್ಯ ಮಂಜು ಬಿಲ್ಲವ, ಬಿಜೆಪಿ ಕಾರ್ಯಕಾರಿಣಿ ಸದದ್ಯ ಕಿರಣ್ಕುಮಾರ್ ಕೊಡ್ಗಿ, ಯುವ ಮೋರ್ಚಾಅಧ್ಯಕ್ಷ ಸತೀಶ್ ಪೂಜಾರಿ, ಮೀನುಗಾರಿಕ ಪ್ರಕೋಷ್ಠ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಕುಂದಾಪುರತಾಪಂ ಮಾಜಿಅಧ್ಯಕ್ಷ ಭಾಸ್ಕರ ಬಿಲ್ಲವ, ಪ್ರಧಾನ ಕಾರ್ಯದರ್ಶಿ ಶಂಕರಅಂಕದಕಟ್ಟೆ, ಸಾಮಾಜಿಕ ಕಾರ್ಯಕರ್ತ ಶರತ್ ಶೆಟ್ಟಿಇದ್ದರು.