Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಜೆ.ಡಿ.ಎಸ್ ಅಭ್ಯರ್ಥಿ ರವಿ ಶೆಟ್ಟಿ ನಾಮಪತ್ರ ಸಲ್ಲಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರವಿ ಶೆಟ್ಟಿ ಬೈಂದೂರು ಚುನಾವಣಾ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಜೆ.ಡಿ.ಎಸ್ ಪಕ್ಷದ ಕೆಂಚನೂರು ಶಾಲನಿ ಶೆಟ್ಟಿ, ಸಂದೇಶ್ ಭಟ್ ಉಪ್ಪುಂದ, ಯೋಗೀಶ ಶೆಟ್ಟಿ, ಮಂಜಯ್ಯ ಶೆಟ್ಟಿ, ಮನ್ಸೂರ್ ಇಬ್ರಾಹಿಂ ಹಾಜರಿದ್ದರು.

ಚುನಾವಣಾಧಿಕಾರಿ ಶ್ರೀನಿವಾಸ ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭ ಬೈಂದೂರು ತಹಶೀಲ್ದಾರ ಪುರಂದರ ಹೆಗಡೆ ಉಪಸ್ಥಿತರಿದ್ದರು.

Exit mobile version