Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ಬೇಸಿಗೆ ಶಿಬಿರ ಸಮಾರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮರವಂತೆಯ ಆಸರೆ ಚಾರಿಟಬಲ್ ಟ್ರಸ್ಟ್ ಅಲ್ಲಿನ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ  ಒಂದು ವಾರದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಟ್ರಸ್ಟ್‌ನ ಅಧ್ಯಕ್ಷ ಸತೀಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಶುಭಾಶಂಸನೆ ಮಾಡಿದ ನಿವೃತ್ತ ಶಿಕ್ಷಕ ಎಂ. ಶಂಕರ ಬಿಲ್ಲವ ಬೇಸಿಗೆ ಶಿಬಿರದಲ್ಲಿ ಮಕ್ಕಳ ಬದುಕಿನ ಮೌಲ್ಯ ವೃದ್ಧಿಗೆ ಪೂರಕವಾದ ವಿಚಾರ ಮತ್ತು ಕೌಶಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅವರು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಒಳಿತು ಮಾಡುವಂತಾಗಲಿ ಎಂದರು.

ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರಲ್ಲದೆ ಯೋಗ ಪ್ರದರ್ಶನ ನೀಡಿದರು. ಎಲ್ಲರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಟ್ರಸ್ಟಿ ಕರುಣಾಕರ ಆಚಾರ್ ಸ್ವಾಗತಿಸಿದರು. ರಾಜೇಶ್ ಆಚಾರ್ ವಂದಿಸಿದರು. ಸತೀಶ ಮಧ್ಯಸ್ಥ ನಿರೂಪಿಸಿದರು.

ಸಾಧನಾ ಅಧ್ಯಕ್ಷ ಚಂದ್ರಗುಪ್ತ ಖಾರ್ವಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಬಳೆಗಾರ್, ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಮೋಹನ ಖಾರ್ವಿ, ಯೋಗ ಶಿಕ್ಷಕ ಸುಬ್ಬಯ್ಯ ದೇವಾಡಿಗ, ಶಿಬಿರದ ನಿರ್ದೇಶಕ ಮಹಾಬಲ ಕೆ, ಟ್ರಸ್ಟಿಗಳಾದ ಗಣೇಶ ಪೂಜಾರಿ, ಸಂತೋಷ ಮೊಗವೀರ, ಶಿವರಾಮ ಪೂಜಾರಿ ಇದ್ದರು.

 

Exit mobile version