Kundapra.com ಕುಂದಾಪ್ರ ಡಾಟ್ ಕಾಂ

ಪೊಲೀಸರ ಬಗ್ಗೆ ನಕಾರಾತ್ಮಕ ಭಾವನೆ ಬೇಡ: ಅಣ್ಣಾಮಲೈ

ಕೋಟ: ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆ ಬೆಳೆಯುತ್ತಿದ್ದು, ಪೊಲೀಸರೆಂದರೆ ಲಂಚಕೋರರೆಂಬ ಭಾವನೆ ನಾಗರೀಕರಲ್ಲಿದೆ. ಆದರೆ ನಿಜ ಜೀವನದಲ್ಲಿ ದಿನದ 24 ಗಂಟೆ ನಾಗರಿಕರ ಕಷ್ಟ ನಷ್ಟಗಳಿಗೆ ಸ್ಪಂದಿಸುವವರು ಪೊಲೀಸರು. ಆದ್ದರಿಂದ ಆರಕ್ಷಕರ ಕುರಿತು ನಕಾರಾತ್ಮಕ ಭಾವನೆ ಬೇಡ ಎಂದು ಉಡುಪಿ ಜಿಲ್ಲಾ ಪೊಲೀಸ್‌ಅಧೀಕ್ಷಕ ಕೆ.ಅಣ್ಣಾಮಲೆ„ ಹೇಳಿದರು.

ಅವರು ಕೋಟ ಕಾರ್ತಟ್ಟು, ಚಿತ್ರಪಾಡಿಯಲ್ಲಿ ಜರಗಿದ ಇಲ್ಲಿನ ಅಘೋರೇಶ್ವರ ಕಲಾರಂಗದ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಯುವ ಸಂಘಟನೆಗಳು ಸಮಾಜದ ಮೌಡ್ಯಗಳನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಕೈಜೋಡಿಸಿದರೆ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.

ಸಮಾರಂಭದಲ್ಲಿ ಜಾನಪದ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೆ„ದ ಸಾಧ‌ಕರು ಮತ್ತು ಖ್ಯಾತ ಈಜು ತರಬೇತುದಾರರನ್ನು ಸಮ್ಮಾನಿಸಲಾಯಿತು ಹಾಗೂ ಆರೋಗ್ಯ ಸಮಸ್ಯೆ ಇರುವವರಿಗೆ ವೈದ್ಯಕೀಯ ನೆರವು ನೀಡಲಾಯಿತು. ಉದ್ಯಮಿ ಕೆ. ಪರಮೇಶ್ವರ ನಾಯರಿ ಅವರು ಓರ್ವ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಸಹಕಾರ ನೀಡಿದರು.

ಸಮಾರಂಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್‌ ರೊ. ಅಭಿನಂದನ ಶೆಟ್ಟಿ, ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್‌, ಉದ್ಯಮಿ ಪರಮೇಶ್ವರ ನಾಯರಿ, ಸಾಲಿಗ್ರಾಮ ಪ.ಪಂ.ಅದ್ಯಕ್ಷೆ ಪಿ ಸಾಧು, ಪ.ಪಂ.ಸದಸ್ಯ ಕಾರ್ಕಡ ರಾಜು ಪೂಜಾರಿ, ಮುರಳೀಧರ ಪೈ, ಸಂಸ್ಥೆಯ ಅಧ್ಯಕ್ಷ ಶಿವಾನಂದ ನಾಯರಿ, ಕಾರ್ಯದರ್ಶಿ ರಾಧಕೃಷ್ಣ ಹಾಗೂ ಖಜಾಂಚಿ ನಿತ್ಯಾನಂದ ನಾಯರಿ ಉಪಸ್ಥಿತರಿದ್ದರು

Exit mobile version