Kundapra.com ಕುಂದಾಪ್ರ ಡಾಟ್ ಕಾಂ

ದ್ವಿತೀಯ ಪಿಯುಸಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿಗೆ ಶೇ.98.95

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ 5825 ಮಂದಿ ಪರೀಕ್ಷೆ ಬರೆದಿದ್ದು 5764 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.98.95 ಫಲಿತಾಂಶ ದಾಖಲಾಗಿದೆ.

ಶುಭಾಂಕರ್ ಚೌಗಲೆ 594 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್‍ನ ಚೇತನ್ ಪೈ 593 ಅಂಕದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಲಕ್ಷ್ಮೀ ನಾರಾಯಣ ರೆಡ್ಡಿ 592 ಅಂಕದೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ ಮತ್ತು ಭರತ್ ಗಜಾನನ ಹೆಗಡೆ ಹಾಗೂ ಪೃಥ್ವೀ ಗಣಪತಿ ಹೆಗಡೆ 591 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನವನ್ನು ಗಳಿಸಿಕೊಳ್ಳುವ ಜೊತೆಗೆ ಆಳ್ವಾಸ್ ರಾಜ್ಯದಲ್ಲಿಯೇ ವಾಣಿಜ್ಯ ವಿಭಾಗದಲ್ಲಿ ಒಟ್ಟು 5 ಸ್ಥಾನವನ್ನು ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಮಿಲಿಷಾ ರೋಡ್ರಿಗಸ್ 593 ಅಂಕದೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ ಹಾಗೂ ವರ್ಷಿನಿ ಕೆ.ಎಸ್, ಹರೀಶ್ ಡಿ.ಜಿ, ಶ್ವೇತಾ ಹೆಗಡೆ ತಲಾ 592 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಟಾಪ್ ಹತ್ತರ ಸ್ಥಾನದಲ್ಲಿ ಒಟ್ಟು 36 ಸ್ಥಾನಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆಯುವ ಮೂಲಕ ರಾಜ್ಯದಲ್ಲೇ ಗರಿಷ್ಟ ಸ್ಥಾನವನ್ನು ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 5 ನೇ ಸ್ಥಾನ ಗಳಿಸಿರುವ ಹರೀಶ್ ಡಿ.ಜಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಆಳ್ವಾಸ್‍ಗೆ ಕೀರ್ತಿ ತಂದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಹರ್ಷಿತಾ .ಎಂ.ಶೆಟ್ಟಿ 575, ಕಾವ್ಯ ಎನ್ ಬೆಂಗಳೂರು 571, ಕೀರ್ತನಾ ಎಂ.ಕೆ 576 ಅಂಕ ಪಡೆಯುದರ ಮೂಲಕ ವಿಶಿಷ್ಟ ಸಾಧನೆ ಗೈದಿದ್ದಾರೆ.

ಕಲಾವಿಭಾಗದಲ್ಲಿ ಕ್ಷೇತ್ರಮಯ್ಯುಂ ಸಂಜಯ್ ಸಿಂಗ್ 568, ಹೇಮಾ ಪಿ.ಬಿ 564, ಅಂಧ ವಿದ್ಯಾರ್ಥಿಗಳಾದ ಸಾತ್ವಿಕ್ ಶೆಟ್ಟಿ 540, ದೀಕ್ಷಿತ್ 519, ಅಂಕಿತಾ ಶೆಟ್ಟಿ 497 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಒಟ್ಟು ಫಲಿತಾಂಶದಲ್ಲಿ ಶೇ.98 ಮೇಲ್ಪಟ್ಟು 28 ವಿದ್ಯಾರ್ಥಿಗಳು, ಶೇ. 95 ಕ್ಕಿಂತ ಮೇಲ್ಪಟ್ಟು 403 ವಿದ್ಯಾರ್ಥಿಗಳು, ಶೇ.90ಕ್ಕಿಂತ ಮೇಲ್ಪಟ್ಟು 1462, ಶೇ.85ಕ್ಕಿಂತ ಮೇಲ್ಪಟ್ಟು 2644 ವಿದ್ಯಾರ್ಥಿಗಳು ಹಾಗೂ ಪ್ರಥಮ ದರ್ಜೆಯಲ್ಲಿ 2786, ದ್ವಿತೀಯ ದರ್ಜೆಯಲ್ಲಿ 299, ತೃತೀಯ ದರ್ಜೆಯಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

16 ವಿದ್ಯಾರ್ಥಿಗಳು 4 ವಿಷಯಗಳಲ್ಲಿ 100 ಅಂಕ ಹಾಗೂ, 34 ವಿದ್ಯಾರ್ಥಿಗಳು 3 ವಿಷಯಗಳಲ್ಲಿ 100 ಅಂಕ ಪಡೆದಿರುತ್ತಾರೆ. ಕನ್ನಡ 23, ಹಿಂದಿ 15, ಸಂಸ್ಕøತ 29, ಭೌತಶಾಸ್ತ್ರ 56, ರಸಾಯನಶಾಸ್ತ್ರ 79, ಗಣಿತ 216, ಜೀವಶಾಸ್ತ್ರ 18, ಕಂಪ್ಯೂಟರ್ ಸೈನ್ಸ್ 41, ಸಂಖ್ಯಾಶಾಸ್ತ್ರ 61, ಇಲೆಕ್ಟ್ರಾನಿಕ್ಸ್ 30, ಅರ್ಥಶಾಸ್ತ್ರ 6, ವ್ಯವಹಾರ ಅಧ್ಯಯನ 29, ಅಕೌಂಟೆನ್ಸಿ 99, ಬೇಸಿಕ್ ಮ್ಯಾಥ್ಸ್‍ನಲ್ಲಿ 22 ವಿದ್ಯಾರ್ಥಿಗಳು ತಲಾ 100 ಅಂಕ ಪಡೆಯುವುದರ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.

 

Exit mobile version