Site icon Kundapra.com ಕುಂದಾಪ್ರ ಡಾಟ್ ಕಾಂ

ಡೆಮು ರೈಲಿನ ಎಕ್ಸೆಲ್‌ ಲಾಕ್‌: ಕುಂದಾಪುರದಲ್ಲಿ ಸ್ಥಗಿತ

ಕುಂದಾಪುರ: ಮಂಗಳೂರಿನಿಂದ ಗೋವಾದ ಮಡಂಗಾವ್‌ಗೆ ಮೇ 7ರಂದು ತೆರಳುತ್ತಿದ್ದ 70106 ಡೆಮು ರೈಲು ಸಂಜೆ ವೇಳೆಗೆ ಕುಂದಾಪುರ ರೈಲ್ವೇ ಸ್ಟೇಷನ್‌ ತಲುಪಿದಾಗ ರೈಲಿನ ಚಕ್ರದ ಎಕ್ಸಿಲ್‌ ಲಾಕ್‌ ಆಗಿ ರೈಲು ಸ್ಥಗಿತಗೊಂಡಿತು.

ರೈಲಿನ ರಿಪೇರಿ ತಂತ್ರಜ್ಞರು ಮಡಂಗಾವ್‌ನಿಂದ ಬರಬೇಕಾಗಿರುವುದರಿಂದ 70106 ಡೆಮು ರೈಲು ಕುಂದಾಪುರದಲ್ಲಿಯೇ ಬಾಕಿ ಆಗಿದೆ. ಆದುದರಿಂದ ಮೇ 8ರ ಬೆಳಗ್ಗೆ ಮಡಂಗಾವ್‌ನಿಂದ ಕುಂದಾಪುರ ಮಾರ್ಗವಾಗಿ ಬರಬೇಕಿದ್ದ ಡೆಮು ರೈಲು 70105 ಅನ್ನು ರದ್ದು ಮಾಡಲಾಗಿದೆ. ಅದರ ಬದಲಿಗೆ ಬೆಳಗ್ಗೆ ಎಂದಿನಂತೆ 70106 ಡೆಮು ರೈಲು ಕುಂದಾಪುರದಿಂದ ಮಂಗಳೂರಿಗೆ ಪಯಣಿಸಲಿದೆ ಎಂದು ಕೊಂಕಣ ರೈಲ್ವೇ ತಿಳಿಸಿದೆ.

Exit mobile version