Kundapra.com ಕುಂದಾಪ್ರ ಡಾಟ್ ಕಾಂ

ಮುಖ್ಯಮಂತ್ರಿಯಾಗಿ ಕುಮಾರಸ್ವಾಮೀ ಪ್ರಮಾಣವಚನ : ಕೊಲ್ಲೂರು ಮುಕಾಂಬಿಕೆಗೆ ಪ್ರಾರ್ಥನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಜೆಡಿಎಸ್ – ಕಾಂಗ್ರೇಸ್ ಜಂಟೀ ಸರಕಾರದಿಂದ ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕುಮಾರಸ್ವಾಮೀ ನೇತೃತ್ವದ ಸರಕಾರಕ್ಕೆ ದೇವರ ಅನುಗ್ರಹ ಇರಲಿ ಹಾಗೂ ರಾಜ್ಯ ಜನತೆಗೆ ಒಳಿತಾಗಲಿ ಎಂದು ಬೈಂದೂರು ಜೆಡಿಎಸ್ ಕಾರ್ಯಕರ್ತರು ಕೊಲ್ಲೂರು ಮುಕಾಂಬಿಕಾ ದೇವಾಲಯದಲ್ಲಿ ಶ್ರೀದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕರಾದ ಹರೀಶ್ ಶೆಟ್ಟಿ, ಬೈಂದೂರು ಬ್ಲಾಕ್ ಅಧ್ಯಕ್ಷ ಯು. ಸಂದೇಶ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಶೆಟ್ಟಿ ಬೈಂದೂರು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಯಶೀಲ ಶೆಟ್ಟಿ, ಉಪಾಧ್ಯಕ್ಷ ರಾಜು ದೇವಾಡಿಗ ಬ್ಲಾಕ್ ವಕ್ತಾರ ಗುರುರಾಜ್ ಶೆಟ್ಟಿ, ಕೊಲ್ಲೂರು ಘಟಕದ ಅಧ್ಯಕ್ಷ ಮಾರುತಿ ಮೊಗವೀರ ಹಾಗೂ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.

 

Exit mobile version