ಕುಂದಾಪ್ರ ಡಾಟ್ ಕಾಂ ಸುದ್ದಿ
ಬೆಂಗಳೂರು: ದುಬೈನ ಉದ್ಯಮಿ, ಬೈಂದೂರು ತಾಲೂಕಿನ ನಾಗೂರಿನ ದಿನೇಶ್ ಚಂದ್ರಶೇಖರ ದೇವಾಡಿಗ ಅವರು ಇತ್ತಿಚಿಗೆ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನಲ್ಲಿ ಜರುಗಿದ 43 ನೇ ಆರ್ಯಭಟ ಅಂತರಾಷ್ಟ್ರೀಯ ಸಮಾರಂಭದಲ್ಲಿ ಪ್ರಧಾನಿಸಲಾಯಿತು.
ಪ್ರಸ್ತುತ ದಬೈನಲ್ಲಿ ನೆಲೆಸಿರುವ ಇವರು ಎಲಿಗೆಂಟ್ ಗ್ರೂಫ್ ಆಫ್ ಕಂಪನಿ ಶಾರ್ಜಾ, ದುಬೈ, ಅಬುದಾಬಿಯ ಮ್ಯಾನೇಜಿಂಗ್ ಡೈರೆಕ್ಟರ್‌ರಾಗಿ ಕಾರ್ಯನಿರ್ವಹಿಸಿರುತ್ತಾರೆ. ಹಾಗೂ ಕುಂದಾಪುರ ದೇವಾಡಿಗ ಮಿತ್ರ ದುಬೈ ಇದರ ಅಧ್ಯಕ್ಷರಾಗಿ , ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ರಿ. ಬಾರ್ಕೂರು ಇದರ ವಿಶ್ವಸ್ಥರಾಗಿಯೂ ಮತ್ತು ನಮ್ಮ ಕುಂದಾಪುರ ಕನ್ನಡ ಬಳಗ ದುಬೈ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ಸಾಮಾಜಿಕ, ಸಾಂಸ್ಕ್ರತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ.