Kundapra.com ಕುಂದಾಪ್ರ ಡಾಟ್ ಕಾಂ

ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಳದ ನಾಗಬನ ಜೀರ್ಣೋದ್ಧಾರಕ್ಕೆ ದೇಣಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕಳವಾಡಿಯ ‘ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ’ದ ನೂತನ ಶಿಲಾಮಯ ಗರ್ಭಗುಡಿಯ ಕೆಲಸ ಪ್ರಗತಿಯಲ್ಲಿದ್ದು ದೇವಸ್ಥಾನದ ‘ನಾಗಬನ’ ನಿರ್ಮಾಣಕ್ಕೆ ತಗಲುವ ರೂ. 1,00,000 ವೆಚ್ಚವನ್ನು ಕಳವಾಡಿಯ ಶ್ರೀ ಮಾರಿಕಾಂಬಾ ಯುತ್ ಕ್ಲಬ್’ನ ಸದಸ್ಯರು ದೇವಸ್ಥಾನದ ಜೀರ್ಣೋದ್ದಾರ ಸಮಿತಿಗೆ ಹಸ್ತಾಂತರ ಮಾಡಲಾಯಿತು .

ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬಾ ಯುತ್ ಕ್ಲಬ್ ಕಳವಾಡಿ ಇದರ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕಳವಾಡಿ, ಪೂರ್ವಾಧ್ಯಕ್ಷ ಪ್ರದೀಪ ಕುಮಾರ್ ಕಾರಿಕಟ್ಟೆ, ಕಾರ್ಯದರ್ಶಿ ಸುಬ್ರಹ್ಮಣ್ಯ ಪೂಜಾರಿ, ಪ್ರವೀಣ ಕಳವಾಡಿ, ಕೃಷ್ಣ ಕಳವಾಡಿ, ಗಣಪತಿ ಪೂಜಾರಿ  ಸಂಸ್ಥೆಯ ಸರ್ವ ಸದಸ್ಯರು ಹಾಜರಿದ್ದರು.

 

Exit mobile version