ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಜೆಸಿಐ ಮಂಗಳೂರು ಸಾಮ್ರಾಟ ಇದರ ವತಿಯಿಂದ ಕರ್ನಾಟಕದಾದಂತ್ಯ ಸುಮಾರು ಮೂರು ಸಾವಿರ ಕಿಲೋಮಿಟರ ಪ್ರಯಾಣ ಕ್ರಮಿಸಿ, ದಾರಿಯುದ್ದಕ್ಕೂ ಆ ಮೂಲಕ ಶಾಂತಿ ಸಂದೇಶದ ಜಾಗ್ರತಿ ಮೂಡಿಸುವ ವಿನೂತನ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನಿಂದ ಹೊರಟ ಕಾರ್ ರ‍್ಯಾಲಿ ಶಿರೂರಿಗೆ ಆಗಮಿಸಿದಾಗ ಜೆಸಿಐ ಶಿರೂರು ಘಟಕವು ಆತ್ಮೀಯವಾಗಿ ಸ್ವಾಗತಿಸಿಕೊಂಡು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ರಾಘವೇಂದ್ರ ಹೊಳ್ಳರವರಿಗೆ ಹಾಗೂ ಅವರ ತಂಡದವರಿಗೆ ಫಲಪುಷ್ಪ ಹಾಗೂ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಕಾರ‍್ಯಕ್ರಮದಲ್ಲಿ ಜೆಸಿಐ ಶಿರೂರಿನ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಜೆಸಿ ಪ್ರಸಾದ ಪ್ರಭು, ಜೆಸಿ ಹರೀಶ ಶೇಟ್, ಜೆಸಿ ಕೃಷ್ಣಮೂರ್ತಿ ಶೇಟ್, ಜೆಸಿ ಗುರುನಾಥ ಶೇಟ್, ಜೆಸಿ ನಾಗೇಶ ಕೆ, ಜೆಜೆಸಿ ಆದರ್ಶ ಶೇಟ್, ವಿನೋದ ಮೇಸ್ತ, ಜೆಸಿ ಕೃಷ್ಣ ಪೂಜಾರಿ ಚಂದ್ರ ಬಿಲ್ಲವ ಉಪಸ್ಥಿತರಿದ್ದರು.