Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿ : ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಹಳೆ ವಿದ್ಯಾರ್ಥಿಸಂಘದ ಉದ್ಘಾಟನೆಯನ್ನು ಮಾಡಿದ ಟಿ.ಬಾಲಚಂದ್ರ ಶೆಟ್ಟಿ ಹಿರಿಯ ವಕೀಲರು ಕುಂದಾಪುರ ಇವರು ತಮ್ಮ ಅನಿಸಿಕೆಗಳನ್ನು ವಿದ್ಯಾರ್ಥಿಗಳ ಜೊತೆಯಲ್ಲಿ ಹಂಚಿಕೊಂಡು ವ್ಯಕ್ತಿಯು ಯಾವತ್ತೂ ತಾನು ನಡೆದು ಬಂದ ಪಥವನ್ನು ಹಾಗೂ ಸಾಧನೆಗೆ ಪ್ರೇರೆಪಿಸಿದ ಶಾಲೆ, ಮಹಾವಿದ್ಯಾಲಯ ಹಾಗೂ ಬೋಧಕರನ್ನು ಯಾವತ್ತೂ ಮರೆಯಬಾರದು. ಯಾಕೆಂದರೆ, ನಮ್ಮ ಇವತ್ತಿನ ಏಳ್ಗೆಗೆ ಪ್ರಾಮಾಣಿಕವಾಗಿ ಹುರಿದುಂಬಿಸಿದವರು ಅವರಾಗಿರುತ್ತಾರೆ. ದೇಹ, ಮನಸ್ಸು ಹಾಗೂ ನಮ್ಮ ಕಾರ್ಯಗಳು ಅವರ ಆಶಿರ್ವಾದದೊಂದಿಗೆ ಮುಂದುವರಿಯಬೇಕು ಅಂದಾಗ ಮಾತ್ರ ಸಮಾಜದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿ ಹಳೇ ವಿದ್ಯಾರ್ಥಿಗಳ ಸಂಘ ಸಂಸ್ಥೆ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವನ್ನು ಮುಂದುವರಿಸಲು ಸಹಾಯಕವಾಗಲಿದೆ. ಅಲ್ಲದೇ, ಸಂಸ್ಥೆಯು ಇನ್ನು ಹೆಚ್ಚು ಏಳ್ಗೆಯನ್ನು ಕಾಣಲು ಈ ಸಂಘದ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳಾದ ಶ್ರೀ. ಸುಭಾಶ್ಚಂದ್ರ ಶೆಟ್ಟಿ ಹಾಗೂ ಶ್ರೀಮತಿ.ಅನುಪಮ.ಎಸ್.ಶೆಟ್ಟಿರವರು ಉಪಸ್ಥಿತರಿದ್ದರು. ಅಲ್ಲದೇ, ಶ್ರೀ.ಸುಭಾಶ್ಚಂದ್ರ ಶೆಟ್ಟಿ ರವರು ಅಧ್ಯಕ್ಷೀಯ ಮಾತನಾಡುಗಳನ್ನಾಡುತ್ತಾ ಹಳೆ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಮುಂದಿನ ನಿಜವಾದ ಪ್ರತಿನಿಧಿಗಳು ಹಾಗೂ ಇವರು ನಮ್ಮ ಸಂಸ್ಥೆಯ ಏಳಿಗೆಗೆ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ನುಡಿದರು. ಪ್ರಾಂಶುಪಾಲರಾದ, ಶ್ರೀ.ಅರವಿಂದ ಮರಳಿ ಸಂಘದ ಧ್ಯೇಯೋದ್ದೇಶದ ಬಗ್ಗೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷನಾಗಿ ಗೋವಿಂದ ಪೈ , ಉಪಾಧ್ಯಕ್ಷೆಯಾಗಿ ಕುಮಾರಿ ಚರಿತ್ರಾ ಶೆಟ್ಟಿ, ಕಾರ್ಯದರ್ಶಿಯಾಗಿ ಪವಿತ್ರ ಕಾಮತ್, ಖಜಾಂಚಿಯಾಗಿ ಅಂಶು ಶೆಟ್ಟಿ ಹಾಗೂ ಮಾಹಿತಿ ನಿರ್ವಾಹಕನಾಗಿ ಹೃತೀಕ್ ಶೆಟ್ಟಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಜರಿದ್ದ ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು ಮತ್ತು ಉದ್ಘಾಟನೆಗೊಂಡ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮವನ್ನು ಶಿಕ್ಷಕ ರಾಮಚಂದ್ರ ಹೆಬ್ಬಾರ್ ನಿರೂಪಿಸಿದರು ಹಾಗೂ ಶಿಕ್ಷಕಿ ಸುಷ್ಮಾ ವಂದಿಸಿದರು.

 

Exit mobile version