Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿ: ದೇವಾಡಿಗ ಸಮಾಜ ಸೇವಾ ಸಂಘ ವಾರ್ಷಿಕ ಮಹಾಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ದೇವಾಡಿಗ ಸಮಾಜ ಸೇವಾ ಸಂಘ ರಿ. ತ್ರಾಸಿ ಇದರ 2ನೇ ವಾರ್ಷಿಕ ಮಹಾಸಭೆ ಹಾಗೂ ಬೆಂಗಳೂರು ದೇವಾಡಿಗ ಸಂಘದ ಉಪಾಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೆ ಇವರ ವತಿಯಿಂದ ವಿದ್ಯಾರ್ಥಿಗಳಿಗ ಉಚಿತ ಪುಸ್ತಕ ವಿತರಣೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಅಣ್ಣಪ್ಪಯ್ಯ ಸಭಾಭವನ ತ್ರಾಸಿಯಲ್ಲಿ ನಡೆಯಿತು.

ಕಾರ್ಯಕ್ರಮನ್ನು ಸನ್ಮಾನ್ಯ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದೇವಾಡಿಗ ಸ.ಸೇ.ಸಂಘದ ಅಧ್ಯಕ್ಷರು ರಾಜು ದೇವಾಡಿಗ ವಹಿಸಿದರು.

ಈ ಸಂದರ್ಭದಲ್ಲಿ ತ್ರಾಸಿ ನಿವೃತ್ತ ಸೈನಿಕರು ಚಂದ್ರ ದೇವಾಡಿಗರವರನ್ನು ಸನ್ಮಾನಿಸಲಾಯಿತು ಹಾಗೂ ಹಾಗೂ ಶಾರದಾ ಎಮ್ ಡಿ ಬಿಜೂರೂ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಕೊಲ್ಲೂರು ಆಡಳಿತ ಮಂಡಳಿ ಸದಸ್ಯೆ ಅಂಬಿಕಾ ಆರ್ ದೇವಾಡಿಗ, ಕುಂದಾಪುರ ಸಂಗೀತ ಭಾರತೀ ಟ್ರಸ್ಟ್ ನ ಕಾರ್ಯದರ್ಶಿ ನಾರಾಯಣ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷರು ಶಾರದ ಡಿ. ಬಿಜೂರು, ಶೀನ ದೇವಾಡಿಗ ,ಜಿಲ್ಲಾ ಪಂಚಾಯತ್ ಸದಸ್ಯರಾದ ಶೋಭಾ ಎಸ್ ಪುತ್ರನ್, ಸಪ್ಟಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ತಲ್ಲೂರೂ, ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ| ರಾಜೇಂದ್ರ ಎಸ್. ನಾಯಕ್ ಕಾಳಾವರ,ತೇಜ ದೇವಾಡಿಗ,ದಿನೇಶ್ ದೇವಾಡಿಗ, ಪಾಂಡು ದೇವಾಡಿಗ, ನಾಗೇಶ್ ದೇವಾಡಿಗ, ಮೊದಲಾದವರು ಉಪಸ್ಥಿತರಿದ್ದರು.

ಅಶೋಕ್ ದೇವಾಡಿಗ ತ್ರಾಸಿ ಸ್ವಾಗತಿಸಿ, ರಾಜೇಶ್ ದೇವಾಡಿಗ ವರದಿ ವಾಚಿಸಿದರು ಹಾಗೂ ಪ್ರಿಯದರ್ಶಿನಿ ಕಮಲೇಶ್ ವಂದಿಸಿದರು. ರವಿ ದೇವಾಡಿಗ ತಲ್ಲೂರೂ ಕಾರ್ಯಕ್ರಮ ನಿರೂಪಿಸಿದರು.

 

Exit mobile version