Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ 2018-19ನೇ ಸಾಲಿನ ಮೊದಲ ಶಿಕ್ಷಕ-ರಕ್ಷಕ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ 2018-19ನೇ ಸಾಲಿನ ಮೊದಲ ಶಿಕ್ಷಕ-ರಕ್ಷಕ ಸಭೆ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕರುಗಳಾದ ಕೆ.ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ.ಎಸ್.ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ, ಕನ್ನಡ ಅಧ್ಯಾಪಕರು ಪದವಿ ಪೂರ್ವ ಕಾಲೇಜು ಮುಂಡ್ಕೂರು ಕಾರ್ಕಳ ಇವರು ತಮ್ಮ ಆಕರ್ಷಕ ಮಾತುಗಳಿಗೆ ಕವಿವಾಣಿಗಳ ಸ್ಪರ್ಶವಿತ್ತು ಮಕ್ಕಳ ಪೋಷಣೆಯಲ್ಲಿ ಪಾಲಕರ ಪಾತ್ರವೇನು ಎಂಬುವುದರ ಕುರಿತು ತಿಳಿಸಿಕೊಟ್ಟರು.

ಶಾಲೆಯ ಪ್ರಾಂಶುಪಾಲರಾದ ಅರವಿಂದ ವಿ. ಮರಳಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 2018-19ನೇ  ಶೈಕ್ಷಣಿಕ ವರ್ಷದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಮತ್ತು ಶಾಲಾನಿಯಮಾವಳಿಗಳ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿಯಾದ ಅನುಪಮ.ಎಸ್.ಶೆಟ್ಟಿಯವರು ಸಂಸ್ಥೆಯ ಶೈಕ್ಷಣಿಕ ಸಾಧನೆಗಳ ಕುರಿತು ತಿಳಿಸುತ್ತಾ ಪ್ರಸ್ತುತ ವರ್ಷದಲ್ಲಿ ಮಕ್ಕಳ ಎಳಿಗೆಗೆ ಪೋಷಕರು ನಿರ್ವಹಿಸಬೇಕಾದ ಪಾತ್ರವೇನು ಎಂಬುವುದರ ಬಗ್ಗೆ ತಿಳಿಸಿದರು.

ಕಾರ್ಯಕ್ರಮವನ್ನು ಶಿಕ್ಷಕರಾದ ರಾಘವೇಂದ್ರ ಅಮುಜೆ ನಿರೂಪಿಸಿದರು, ಶಿಕ್ಷಕಿ ವಿಶಾಲ ಶೆಟ್ಟಿ ಸ್ವಾಗತಿಸಿ, ಶ್ರೀಮತಿ.ಶೈಲಜಾ ವಂದಿಸಿದರು.

 

Exit mobile version