Site icon Kundapra.com ಕುಂದಾಪ್ರ ಡಾಟ್ ಕಾಂ

ತಗ್ಗರ್ಸೆ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸ.ಹಿಪ್ರಾ.ಶಾಲೆ ತಗ್ಗರ್ಸೆ ಇಲ್ಲಿ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಜರಗಿತು.

ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಎಸ್ ಡಿ .ಎಮ್.ಸಿ ಅಧ್ಯಕ್ಷರಾದ ಪ್ರಭಾಕರ್ ಗಾಣಿಗ ವಹಿಸಿದ್ದರು. ಟಿ. ನಾರಾಯಣ ಹೆಗ್ಡೆ, ಪ್ರಭಾಕರ್ ಶೆಟ್ಟಿ ನೆಲ್ಯಾಡಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೆಂಕಟರಮಣ ದೇವಾಡಿಗ, ಮೀನಾಕ್ಷಿ ಸಂಜು ಪೂಜಾರಿ, ಉದ್ಯಮಿ ರವಿದಾಸ್ ಮತ್ತು ನಾಗರಾಜ್ ಹೆಬ್ಬಾಗಿಲು ಇವರು ನೀಡಿದ ಕಲಿಕಾ ಸಾಮಗ್ರಿಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಸಮಾರಂಭದಲ್ಲಿ ಜಿಲ್ಲಾಕೇಂದ್ರ ಗೃಂಥಾಲಯ ನೀಡಿದ 500 ಪುಸ್ತಕಗಳನ್ನು ಸಾಹಿತ್ಯ ಪರಿಷತ್ ಬೈಂದೂರು ಘಟಕದ ಅಧ್ಯಕ್ಷರಾದ ಗಣಪತಿ ಹೋಬಳಿದಾರ್ ಮತ್ತು ಬೈಂದೂರು ಮಾದರಿ ಶಾಲೆಯ ಮುಖ್ಯಶಿಕ್ಷಕರಾದ ಜನಾರ್ದನ ಶಾಲೆಗೆ ಹಸ್ತಾಂತರಿಸಿದರು. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ತಗ್ಗರ್ಸೆ” ಬಿ” ಒಕ್ಕೂಟದ ಸದಸ್ಯರು ನೀಡಿದ ನಲಿಕಲಿ ಕುರ್ಚಿಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಆರೋಗ್ಯ ಕಾರ್ಯಕರ್ತೆ ಶಾಂತಾ ಆರೋಗ್ಯ ಮಾಹಿತಿ ನೀಡಿದರು.

ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಭಾಷಣ ಮಾಡಿದರು. ಸಹಶಿಕ್ಷಕಿ ಭಾಗೀರಥಿ ಸ್ವಾಗತಿಸಿದರು.

 

Exit mobile version