Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ರೈತ ಸಂಘದ ವತಿಯಿಂದ ಮೆಸ್ಕಾಂ ಕಛೇರಿಗೆ ಮುತ್ತಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕಳೆದ ಹಲವು ದಿನಗಳಿಂದ ಅನಿಯಮಿತ ವಿದ್ಯುತ್ ವೈಫಲ್ಯವನ್ನು ಖಂಡಿಸಿ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ  ಬೈಂದೂರು ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಯಿತು.

ಈ ಸಂದಭದಲ್ಲಿ ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಬೈಂದೂರಿನಲ್ಲಿರುವಂತ ವಿದ್ಯುತ್ ಸಮಸ್ಯೆ ರಾಜ್ಯಮಟ್ಟದ ಅಧಿಕಾರಿಗಳಿಗೂ ತಿಳಿದಿದೆ. ಮೆಸ್ಕಾಂ ಅಧಿಕಾರಿಗಳ ನಿಷ್ಕಾಳಜಿಯಿಂದಲೇ ಸಾರ್ವಜನಿಕರು ಪರದಾಡುವಂತಾಗಿದೆ. ಬೈಂದೂರಿನ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಬೆಲೆ ಕೊಡುತ್ತಿಲ್ಲ. ಮಾತ್ರವಲ್ಲದೇ ದೂರು ಪಡೆಯಬೇಕಾದಂತ ಸಂದರ್ಭದಲ್ಲಿ ದೂರವಾಣಿಗಳಿಗೆ ಪ್ರತಿಕ್ರಿಯೆ ನೀಡದಿರುವುದು ಇಲ್ಲಿಯ ಅಧಿಕಾರಿಗಳ ಅಹಂಕಾರದ ಪ್ರವೃತ್ತಿಯಾಗಿದೆ. ಮುಂದಿನ ದಿನದಲ್ಲಿ ಬೈಂದೂರಿನ ಹಳ್ಳಿಹಳ್ಳಿಗಳ ವಿದ್ಯುತ್ ವೈಫಲ್ಯವನ್ನು ನಿಭಾಯಿಸದಿದ್ದರೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು.ಇದೇ ರೀತಿ ವಿದ್ಯುತ್ ವೈಫಲ್ಯ ಮುಂದುವರಿದರೆ ಶಾಸಕರ ನೇತ್ರತ್ವದಲ್ಲಿ ಬಂದೂರಿನಲ್ಲಿ ಹೋರಾಟ ನಡೆಸಲಾಗುವುದು. ಬಡವರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸುತ್ತಿಲ್ಲ ಶ್ರೀಮಂತರು ಕರೆ ಮಾಡಿದರೆ ತಕ್ಷಣ ಸ್ಪಂದಿಸುತ್ತಾರೆ.ಇಂತಹ ಪ್ರವೃತ್ತಿಯನ್ನು ಅಧಿಕಾರಿಗಳು ಸುಧಾರಿಸಿಕೊಳ್ಳಬೇಕಾಗಿದೆ ಎಂದರು.

ಬೈಂದೂರು ಮೆಸ್ಕಾಂ ಅಧಿಕಾರಿ ಯಶವಂತ್ ಮಾತನಾಡಿ ಬೈಂದೂರಿನಲ್ಲಿ ತಾಂತ್ರಿಕ ಕಾರಣಗಳಿಂದ ಈ ರೀತಿಯ ಸಮಸ್ಯೆಗಳಾಗಿವೆ. ಇನ್ನು ಮುಂದೆ ಈ ರೀತಿ ಸಮಸ್ಯೆಯಾಗದಂತೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಮತ್ತು ಇಲ್ಲಿನ ಸಮಸ್ಯೆಗಳಿಗೆ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶಂಕರ ಪೂಜಾರಿ,ಪಡುವರಿ ಗ್ರಾ.ಪಂ ಉಪಾಧ್ಯಕ್ಷ ಸದಾಶಿವ ಡಿ.ಪಡುವರಿ, ವಿಶ್ವ ಹಿಂದು ಪರಿಷತ್ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು , ನೆಲ್ಯಾಡಿ ದಿವಾಕರ ಶೆಟ್ಟಿ, ಜೈಸನ್ ಎಂ.ಡಿ, ಗೋಪಾಲ ಗಾಣಿಗಬೈಂದೂರು, ಪ್ರಸನ್ನ ಕುಮಾರ್ ಶೆಟ್ಟಿ ಕರಾವಳಿ, ದಿನೇಶ್ ಕುಮಾರ್ ಶಿರೂರು,ಬಾಬು ಮೊಗೇರ್ ಅಳ್ವೆಗದ್ದೆ ,ಸಂಜೀವ ಮೊಗವೀರ ದೊಂಬೆ ಹಾಗೂ ರೈತ ಸಂಘದ ಮುಖಂಡರು ಹಾಜರಿದ್ದರು.

 

 

 

Exit mobile version