ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಪುರಸಭೆಯ ವಾರ್ಡುವಾರು ಮೀಸಲಾತಿ ಪ್ರಕಟಗೊಂಡಿದೆ. 23 ವಾರ್ಡುಗಳ ಪೈಕಿ ಮಹಿಳೆಯರಿಗೆ ಕೇವಲ 10 ಸ್ಥಾನಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಸ್ಥಳೀಯಾ ಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಪ್ರಾತಿನಿಧ್ಯ ನೀಡಬೇಕು ಎನ್ನುವ ನಿಯಮ ಇಲ್ಲಿಗೆ ಮಾತ್ರ ಅನ್ವಯ ಆಗಿಲ್ಲ.
ಈ ಬಾರಿ ಕುಂದಾಪುರ ಪುರಸಭೆಯಲ್ಲಿ ಮಾತ್ರ 23 ವಾರ್ಡ್ಗಳ ಪೈಕಿ ಕೇವಲ 10 ವಾರ್ಡ್ಗಳಲ್ಲಿ ಮಾತ್ರ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. 2007 ರಲ್ಲಿದ್ದ ವಾರ್ಡುವಾರು ಮೀಸಲಾತಿ ಪಟ್ಟಿಯನ್ನೇ 2013 ರಲ್ಲಿಯೂ ಮುಂದುವರಿಸಿದ್ದು, ಈಗ 10 ವರ್ಷಗಳ ಅನಂತರ ವಾರ್ಡುವಾರು ಮೀಸಲಾತಿಯನ್ನು ಬದಲಿಸಲಾಗಿದೆ.
ಪ್ರತಿ 5 ವರ್ಷಕ್ಕೊಮ್ಮೆ ವಾರ್ಡುವಾರು ಮೀಸಲಾತಿ ಬದಲಾಗಬೇಕು ಎನ್ನುವ ನಿಯಮವಿದ್ದರೂ, ಕಳೆದ 3 ಅವಧಿಯಿಂದಲೂ ಕುಂದಾಪುರ ಪುರಸಭೆಯ ಹುಂಚಾರುಬೆಟ್ಟು ವಾರ್ಡಿನಲ್ಲಿ ಸಾಮಾನ್ಯ ಮಹಿಳೆಗೆ, ಮದ್ದುಗುಡ್ಡೆ ವಾರ್ಡಿನಲ್ಲಿ ಸಾಮಾನ್ಯ, ಸೆಂಟ್ರಲ್ ವಾರ್ಡ್ನಲ್ಲಿ ಸಾಮಾನ್ಯ ಕೋಡಿ ಉತ್ತರ ವಾರ್ಡ್ನಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.