Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾಗಿ ಜಯಾನಂದ ಹೋಬಳಿದಾರ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾಗಿ ಜಯಾನಂದ ಹೋಬಳಿದಾರ್ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೈಂದೂರು ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷರನ್ನಾಗಿ ಜಯಾನಂದ ಹೋಬಳಿದಾರ್ ಅವರನ್ನು ಸೂಚಿಸಿ ಆಯ್ಕೆಮಾಡಲಾಗಿದೆ. ಉಪಾಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಶಿವರಾಮ ಕೃಷ್ಣ ಭಟ್, ನೀಲಕಂಠ ಹುದಾರ್, ಕೃಷ್ಣಯ್ಯ ಮದ್ದೋಡಿ, ಜೋಸೆಫ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಭಟ್ ಉಪ್ಪುಂದ, ಜೊತೆ ಕಾರ್ಯದರ್ಶಿಯಾಗಿ ಆನಂದ ಯೋಜನಾನಗರ, ಗಣೇಶ್ ರಾವ್, ಪ್ರಕಾಶ್ ಮೇಸ್ತ ಶಿರೂರು, ವಿಶ್ವನಾಥ ಮೊಗವೀರ ಪಡುಕೋಣೆ, ಅಬ್ದುಲ್ ಖಾದರ್ ಕಿರಿಮಂಜೇಶ್ವರ, ನಿತಿನ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಮುತ್ತಯ್ಯ ಪೂಜಾರಿ ಯಡ್ತರೆ, ಖಜಾಂಚಿಯಾಗಿ ರವೀಂದ್ರ ಕೆ. ಪಡುವರಿ ಅವರನ್ನು ಆಯ್ಕೆಮಾಡಲಾಗಿದೆ.

Exit mobile version