Site icon Kundapra.com ಕುಂದಾಪ್ರ ಡಾಟ್ ಕಾಂ

ಕಂದಕಕ್ಕೆ ಉರುಳಿದ ಟೆಂಪೋ: 7 ಮಂದಿಗೆ ಗಾಯ

ಕೊಲ್ಲೂರು: ಇಲ್ಲಿನ ಹಾಲ್ಕಲ್‌ನ ಆನೆಝರಿಯ ಸಮೀಪ ಬೈಕ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ನಡೆದ ಅಪಘಾತದಲ್ಲಿ ಟೆಂಪೋ ಟ್ರಾವೆಲ್ ಚಾಲಕನ ನಿಯಂತ್ರಣ ತಪ್ಪಿ 15 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಎರಡೂ ವಾಹನದಲ್ಲಿದ್ದ 7 ಮಂದಿ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

ಕೊಲ್ಲೂರಿನ ಶ್ರೀ ದೇವರ ದರ್ಶನ ಮುಗಿಸಿದ ಒಂದೇ ಕುಟುಂಬದ 15 ಮಂದಿ ಸದಸ್ಯರು ಟೆಂಪೋ ಟ್ರಾವೆಲ್ ನಲ್ಲಿ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಆನೆಝರಿಯ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಬೈಕ್‌ಗೆ ಬಡಿದ ಪರಿಣಾಮ ಟೆಂಪೋ ಆಳದ ಕಂದಕಕ್ಕೆ ಬಿತ್ತು. ಟೆಂಪೋ ಟ್ರಾವೆಲ್ಸ್‌ನಲ್ಲಿದ್ದ ಪ್ರಯಾಣಿಕರಾದ ಗಾಯಾಳುಗಳು ಲಿಂಗಪ್ಪ ಆಚಾರಿ (52. ವ.), ಚಂದ್ರಾವತಿ ಆಚಾರಿ (42. ವ.) ಎಂದು ತಿಳಿದುಬಂದಿದೆ. ಬೈಕ್‌ ಸವಾರರಾದ ಸತ್ಯನಾರಾಯಣ ಗಾಣಿಗ ಹಾಗೂ ರಂಜನಿ ಗಾಯಗೊಂಡು ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ

Exit mobile version