Site icon Kundapra.com ಕುಂದಾಪ್ರ ಡಾಟ್ ಕಾಂ

5ನೇ ಬಾರಿಗೆ ಎಂ.ಡಿ.ಆರ್.ಟಿ. ಆಗಿ ಎಲ್.ಐ.ಸಿ. ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಮುಖ್ಯ ಜೀವವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಉತ್ತಮ ಜೀವಾವಿಮಾ ಪಾಲಿಸಿ ಮತ್ತು ಗ್ರಾಹಕ ಸೇವೆಯೊಂದಿಗೆ ನಿರಂತರವಾಗಿ 5ನೇ ಬಾರಿಗೆ ಅಮೇರಿಕಾದ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಸದಸ್ಯತ್ವ ಅರ್ಹತೆ ಪಡೆದಿರುತ್ತಾರೆ.

ಕೋಣಿಯ ಮಾತಾ ಮೊಂಟೆಸ್ಸೋರಿ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಇವರು ಕುಂದಾಪುರ ಪರಿಸರದ ಹೆಮ್ಮೆಯ ಪ್ರತಿನಿಧಿಯಾಗಿದ್ದು ಶಾಖೆಯ ಏಕೈಕ ಗ್ಯಾಲಕ್ಸಿ ಕ್ಲಬ್‌ನ ಸದಸ್ಯರಾಗಿರುತ್ತಾರೆ.

ಅವರ ಈ ಸಾಧನೆಗೆ ಶಾಖೆಯ ಸರ್ವ ಸಿಬ್ಬಂದಿ ವರ್ಗದವರು ಅಸಿಸ್ಟೆಂಟ್ ಮ್ಯಾನೇಜರ್ ಗಿರೀಶ್ ಎಮ್. ಮತ್ತು ಮುಖ್ಯ ಪ್ರಬಂಧಕ ಕೆ. ಪ್ರಭಾಕರ ಅವರು ಅಭಿನಂದಿಸಿದ್ದಾರೆ.

 

Exit mobile version