Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು: ರಮೇಶ್ ಪೈ ಅವರ ಭಕ್ತಿ ಸಂಗೀತ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 40ನೇ ಕಾರ್ಯಕ್ರಮವಾಗಿ ಉದಯೋನ್ಮುಖ ಗಾಯಕ ಕೆ, ರಮೇಶ್ ಪೈ, ಕುಂದಾಪುರ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ತಲ್ಲೂರು ವಿಠ್ಠಲ ಭಜನಾ ಮಂಡಳಿ ಹಾಗೂ ದಿನೇಶ್ ದೇವಾಡಿಗ ತಂಡ ಉಪ್ಪಿನಕುದ್ರು ಇವರ ಭಜನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು.

ಸಭಾ ಕಾರ್ಯಕ್ರಮದಲ್ಲ್ಲಿ ಗಂಗೊಳ್ಳಿಯ ಡಾ. ಕಾಶೀನಾಥ್ ಪೈಯವರು ಅಧ್ಯಕ್ಷರಾಗಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಎಲ್.ಐ.ಸಿ, ಯ ವಿಜಯಕುಮಾರ್ ಮೈಸೂರು, ಕುಂದಾಪುರದ ಜನಾರ್ಧನ್ ಮಲ್ಯ, ಕೆ. ರಮೇಶ್ ಪೈ ಕುಂದಾಪುರ ಹಟ್ಟಿಯಂಗಡಿಯ ಶಿಕ್ಷಕರಾದ ಉದಯ ಭಂಡಾರ್‌ಕಾರ್ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರವರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಗೊಂಬೆಯಾಟ ರಂಗಭೂಮಿಯ ಹಿತೈಶಿ ಹಾಗೂ ಪ್ರೋತ್ಸಾಹಕರಾದ ಡಾ. ಎಚ್.ವಿ. ನರಸಿಂಹ ಮೂರ್ತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆ. ರಮೇಶ್ ಪೈಯವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕ ನಾಗೇಶ್ ಶ್ಯಾನುಭಾಗ್‌ರವರು ಕಾರ್ಯಕ್ರಮ ನಿರೂಪಿಸಿದರು.

 

Exit mobile version