ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರಾಮಕ್ಷತ್ರೀಯ ಯುವಕ ಮಂಡಳಿ ಕುಂದಾಪುರ ಆಶ್ರಯದಲ್ಲಿ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಹಾಗೂ 2017-18ನೇ ಸಾಲಿನ ಮಹಾಸಭೆ ಜರುಗಿತು.
ರಾಮಕ್ಷತ್ರೀಯ ಸಂಘದ ಅಧ್ಯಕ್ಷರಾದ ರವೀಂದ್ರ ಕಾವೇರಿಯವರು ಅಧ್ಯಕ್ಷತೆ ವಹಿಸಿದ್ದರು. 2017-18 ನೇ ಸಾಲಿನ ಅಧ್ಯಕ್ಷರಾದ ಅಜೆಯ್ ಹವಲ್ದಾರ್, ಕಾರ್ಯದರ್ಶಿ ಮಂಜುನಾಥ್ ಉಪ್ಪಿನಕುದ್ರು, ನಿಯೋಜಿತ ಅಧ್ಯಕ್ಷರಾದ ಸಿ.ಎಚ್.ಗಣೇಶ್, ಗೌರವಾಧ್ಯಕ್ಷ ಭಾಸ್ಕರ ಬಾಣ, ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ನಾಣಿ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2018-19ನೇ ಸಾಲಿನ 53 ನೇ ವರ್ಷದ ಅಧ್ಯಕ್ಷರಾಗಿ ಸಿ.ಎಚ್.ಗಣೇಶ್‌ರವರು ಅಧಿಕಾರ ವಹಿಸಿಕೊಂಡರು. ಹಾಗೂ 2019-20 ನೇ ಸಾಲಿನ ಅಧ್ಯಕ್ಷರಾಗಿ ರವಿ ಕೆ. ಕೆಂಚಮ್ಮನ ಮನೆಯವರನ್ನು ಆಯ್ಕೆ ಮಾಡಲಾಯಿತು. ಬಳಿಕ ರಾವಣ ವಧೆ ಯಕ್ಷಗಾನ ತಾಳಮದ್ದಲೆ ಜರುಗಿತು.
ಕಾರ್ಯದರ್ಶಿ ಮಂಜುನಾಥ ಉಪ್ಪಿನಕುದ್ರು ವರದಿ ಮಂಡಿಸಿದರು. ಅಜೆಯ್ ಹವಲ್ದಾರ್‌ರವರು ಸ್ವಾಗತಿಸಿದರು.