Site icon Kundapra.com ಕುಂದಾಪ್ರ ಡಾಟ್ ಕಾಂ

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ರಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ವಿದ್ಯಾರ್ಥಿ ಸರಕಾರದ ರಚನೆ ಚುನಾವಣೆಯ ಮೂಲಕ ನಡೆಸಲಾಯಿತು.

ಚುನಾವಣೆ ದಿನಾಂಕ ಘೋಷಣೆ, ನಾಮಪತ್ರ ಸ್ವೀಕಾರ, ನಾಮಪತ್ರ ಹಿಂದೆಗೆತ, ಅಭ್ಯರ್ಥಿಗಳ ಅಂತಿಮ ಘೋಷಣೆ, ಚುನಾವಣಾ ಚಿಹ್ನೆಯ ಆಯ್ಕೆ, ಅಭ್ಯರ್ಥಿಗಳಿಂದ ಪ್ರಚಾರ, ಬ್ಯಾಲಟ್ ಪೇಪರ್ ಪ್ರಿಂಟಿಂಗ್ ಚುನಾವಣೆ ಪ್ರಕ್ರಿಯೆಗಳನ್ನು ಸಂವಿಧಾನ ಬದ್ಧವಾಗಿ ಮಾಡಲಾಯಿತು. ಶಿಸ್ತಿನ ಮೇಲ್ವಿಚಾರಣೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಅಧ್ಯಾಪಕ ವೃಂದ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಶಾಲಾ ಹಾಜರಿ ಪುಸ್ತಕವನ್ನೆ ಮತದಾರರ ಪಟ್ಟಿಯನ್ನಾಗಿ ಉಪಯೋಗಿಸಲಾಯಿತು.

ಶಾಲಾ ನಾಯಕನಾಗಿ ಪ್ರಶುಮ್, ಶಿಸ್ತು ಪಾಲನಾ ಸಮಿತಿ ನಾಯಕ ಮನ್ವಿತ್, ಸಾಂಸ್ಕೃತಿಕ ಸಮಿತಿ ನಾಯಕಿ ಪ್ರಥ್ವಿ ಮತ್ತು ಕ್ರೀಡಾ ನಾಯಕನಾಗಿ ಕಾರ್ತಿಕ್ ಪ್ರತಿಜ್ಞಾ ವಿದಿಯನ್ನು ತಿಮ್ಮೇಶ್ ಬಿ.ಎನ್. ಠಾಣಾಧಿಕಾರಿ ಬೈಂದೂರು ಇವರಿಂದ ಸ್ವೀಕರಿಸಿದರು. ಚುನಾವಣಾ ಅಧಿಕಾರಿಯಾಗಿ ಯು.ಎಚ್ ರಾಜ್‌ರಾಮ ಭಟ್ ಹಾಗೂ ಮುಖ್ಯ ಶಿಕ್ಷಕ ರವಿದಾಸ ಶೆಟ್ಟಿ ಅವರ ಉಸ್ತುವಾರಿಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯಿತು.

 

Exit mobile version