Kundapra.com ಕುಂದಾಪ್ರ ಡಾಟ್ ಕಾಂ

ಗ್ರೀನ್‌ವ್ಯಾಲಿಗೆ ಪಿಯುಸಿಯಲ್ಲಿ ಶೇ.100 ಫಲಿತಾಂಶ

ಪಿಯುಸಿಯಲ್ಲಿ ಸತತ 7ನೇ ಭಾರಿಗೆ, ಐಸಿ‌ಎಸ್‌ಇ ನಲ್ಲಿ ಸತತ 8ನೇ ಭಾರಿಗೆ ಶೇ.100 ಫಲಿತಾಂಶ ದಾಖಲು 

ಬೈಂದೂರು: ಇಲ್ಲಿನ ಗ್ರೀನ್‌ವ್ಯಾಲಿ ನ್ಯಾಷನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸತತ ಏಳನೆ ಬಾರಿಗೆ ಶೇ. 100 ಫಲಿತಾಂಶವನ್ನು ದಾಖಲಿಸಿದೆ. ಒಟ್ಟು 70 ವಿದ್ಯಾರ್ಥಿಗಳಲ್ಲಿ 67 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಫೈಕಾ ಕೋಲ್ಕರ್ 563 (ಶೇ. 94) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥ್ಥಾನ ಗಳಿಸಿದ್ದಾರೆ. ಸಹನಾ 557 (ಶೇ. 93) ಅಂಕಗಳನ್ನು ಪಡೆದಿದ್ದರೆ, ಸುಹಾ 549 (ಶೇ. 92) ಅಂಕಗಳೊಂದಿಗೆ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ರುಕ್ನುದ್ದೀನ್ ಹುಸೈನ್ 548 (ಶೇ. 91) ಅಂಕ ಮತ್ತು ಫೈಝಾ ಬೇಗಂ 545 (ಶೇ. 90.83) ಅಂಕಗಳನ್ನು, ಜಾಸ್ಮಿನ್ ಮೊಮಿನ್ ಮತ್ತು ಟಿ. ಮುಹಮ್ಮದ್ ಸಲೀಂ 542 (ಶೇ. 90) ಅಂಕಗಳನ್ನು ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಫೈಝಾ ಪರ್ವೀನ್ ಮುಹಮ್ಮದ್ ಉಮರ್ ವೌಲಾನಾ 555 (ಶೇ. 93) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಈಕೆ ಬುಸಿನೆಸ್ ಸ್ಟಡೀಸ್‌ನಲ್ಲಿ 100, ಅಕೌಂಟೆನ್ಸಿಯಲ್ಲಿ 99 ಅಂಕಗಳನ್ನು ಪಡೆದಿದ್ದಾರೆ. ಅಹ್ಮದ್ ಬಶೀರ್ (ಶೇ. 88) ಅಂಕಗಳನ್ನು ಗಳಿಸಿದ್ದು, ವ್ಯವಹಾರ ಅಧ್ಯಯನದಲ್ಲಿ 99 ಅಂಕಗಳನ್ನು ಪಡೆದಿದ್ದಾರೆ. ಇಸ್ಮಾಯೀಲ್ ಝಿಯಾದ್ ಮತ್ತು ಖಾಝಿ ಸೆಹ್ರಾನ್ ಶೇ. 88 ಅಂಕಗಳನ್ನು ಗಳಿಸಿದ್ದಾರೆ.

ಐಸಿ‌ಎಸ್‌ಇನಲ್ಲಿ ಉತ್ತಮ ಸಾಧನೆ

ನ್ಯಾಷನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜು ವಿದ್ಯಾರ್ಥಿಗಳು ಐಸಿ‌ಎಸ್‌ಇ 10ನೆ ತರಗತಿ ಪರೀಕ್ಷೆಯಲ್ಲಿ ಸತತ ಎಂಟನೆ ವರ್ಷ ಶೇ.100 ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ. ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ, 10 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 37 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಮುಹಮ್ಮದ್ ಸುಹೈಲ್ 470 ಅಂಕ (ಶೇ. 96)ಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದು, ಮುಹಮ್ಮದ್ ಸಾಲಿಂ 468 (ಶೇ. 94) ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ದರ್ಶನ್ ಚಂದ್ರಶೇಖರ್ ಶೆಟ್ಟಿ 465 (ಶೇ. 93) ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಾಗೂ ವಿಕ್ರಮ್ 460 (ಶೇ. 92) ಹಾಗೂ ವೈಷ್ಣವ್ ಶೆಟ್ಟಿ 447 (ಶೇ. 89) ಅಂಕಗಳನ್ನು ಪಡೆದಿದ್ದಾರೆ. ಶಾಲಾ ಆಡಳಿತ ಪರವಾಗಿ ಅಧ್ಯಕ್ಷರಾದ ಸೈಯದ್ ಅಬ್ದುಲ್ ಖಾದರ್ ಬಾಶು ಅವರು, ಎಲ್ಲಾ ವಿದ್ಯಾರ್ಥಿಗಳು, ಶಾಲಾ ಪ್ರಾಂಶುಪಾಲರು, ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

Exit mobile version