Kundapra.com ಕುಂದಾಪ್ರ ಡಾಟ್ ಕಾಂ

ಗ೦ಗೊಳ್ಳಿ ಎಸ್.ವಿ. ಕಾಲೇಜು: 96.7% ಫಲಿತಾ೦ಶ

ಗ೦ಗೊಳ್ಳಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಶೇಕಡ 96.7ರಷ್ಟು ಫಲಿತಾ೦ಶವನ್ನು ದಾಖಲಿಸುವುದರ ಮೂಲಕ ಉತ್ತಮ ಸಾಧನೆ ಮಾಡಿದೆ. ಕಾಲೇಜಿನ ವಿಜ್ಞಾನ ವಿಭಾಗ 91%  ವಾಣಿಜ್ಯ ವಿಭಾಗ 99.3% ಮತ್ತು ಕಲಾ ವಿಭಾಗ 94.4% ಫಲಿತಾ೦ಶವನ್ನು ಪಡೆದಿದೆ. ಪರೀಕ್ಷೆಗೆ ಕುಳಿತ 203 ವಿದ್ಯಾರ್ಥಿಗಳಲ್ಲಿ  26 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು 132ವಿದ್ಯಾರ್ಥಿಗಳು ಪ್ರಥಮ,30 ವಿದ್ಯಾರ್ಥಿಗಳು ದ್ವಿತೀಯ ಹಾಗು 5 ವಿದ್ಯಾರ್ಥಿಗಳು  ತೃತೀಯ ದರ್ಜೆಯಲ್ಲಿ ಉತ್ತೀಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸುನೀತಾ ಪೂಜಾರಿ 573, ವಿಜ್ಞಾನ ವಿಭಾಗದಲ್ಲಿ ರಾಹುಲ್ ಆರ್ ಶಾನುಭಾಗ್ 571, ಕಲಾ ವಿಭಾಗದಲ್ಲಿ ಶ್ರುತಿ 435 ಅ೦ಕಗಳೊ೦ದಿಗೆ ಅಗ್ರ ಸ್ಥಾನ ಗಳಿಸಿದ್ದಾರೆ. ಉತ್ತಮ ಫಲಿತಾ೦ಶ ಸಾಧಿಸಲು  ನೆರವಾದ ಎಲ್ಲರನ್ನೂ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಮತ್ತು  ಕಾಲೇಜಿನ ಆಡಳಿತ ಮ೦ಡಳಿ ಅಭಿನ೦ದಿಸಿದ್ದಾರೆ.

ಪಿ. ಯು. ಸಿ. ಸಾಧಕರು

ವಾಣಿಜ್ಯ ವಿಭಾಗ

೧. ಅಭಿಷೇಕ್ ಗಾಣಿಗ – 539

೨. ಗಿರೀಶ ಶೆಟ್ಟಿ -524

೩. ಕಿಶನ್ ಪೂಜಾರಿ – 510

೪. ಮಹೇಶ -512

೫. ನಿತ್ಯಾನಂದ ಖಾರ್ವಿ – 512

೬. ನಿವೇದಿತಾ ಖಾರ್ವಿ -534

೭. ಪೂಜಾರಿ ಸಚಿನ – 554

೮. ಪ್ರಗತಿ ಮೇಸ್ತ -518

೯. ರಂಜನ್ ಆಚಾರ‍್ಯ – 514

೧೦. ಸಂದೀಪ ಆಚಾರ‍್ಯ – 533

೧೧. ಸಂಕೇತ ಪೂಜಾರಿ -557

೧೨. ಸುನೀತ ಪೂಜಾರಿ  – 573

೧೩. ಸೂರಜ್ – 518

೧೪. ಸುಷ್ಮಿತಾ ಎನ್. ಕೆ -511

೧೫. ಝುಹಾ – 525

ವಿಜ್ಞಾನ ವಿಭಾಗ 

೧. ಅಮಿತ್ ಪೈ – 552

೨. ಆಯಿಶಾ ಖಾಝಿ – 533

೩. ದೀಕ್ಷಿತಾ ಕೆ- 554

೪. ಹಾಝಿರಾ ಸಾಹಿಲ್ – 517

೫. ಮೊಹಮ್ಮದ್ ರಾಹಿಕ್ – 528

೬. ನಿಕಿತಾ ಭಂಡಾರಿ – 523

೭. ರಾಹುಲ್ ಶ್ಯಾನುಭಾಗ – 571

೮. ರಾವ್ ಸಂಪ್ರದಾ – 548

೯. ರಿದಾಃ ಫಾತಿಮ – 533

೧೦. ರಿಹಾ ರೆಹಮಾನ್ – 541

೧೧. ಇಬ್ರಾಹಿಂ ಖಲೀಲ್ – 561

೧೨. ಸನತ್ ಬಿ. – 525

೧೩. ಶ್ರೀಲತಾ – 522

೧೪. ಸುಪ್ರೀತಾ – 517

Exit mobile version