Site icon Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಕರಾವಳಿ ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ: ಮೇಲ್ಛಾವಣೆ ಗುದ್ದಲಿ ಪೂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಶಿರೂರು ಕರಾವಳಿ ಇದರ ವತಿಯಿಂದ 20ನೇ ವರ್ಷದ ಗಣೇಶೋತ್ಸವದಲ್ಲಿ ನಿರ್ಮಿಸಲು ಉದ್ದೇಶಿಸಿದ ಸಭಾಭವನದ ಮೇಲ್ಛಾವಣೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ಇಂದು ಬೆಳಿಗ್ಗೆ ಸಂಘದ ಸಮ್ಮುಖದಲ್ಲಿ ನಡೆಯಿತು.

ಸಂಘದ ಅದ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆಯಲ್ಲಿ ಹಾಗೂ ಅರ್ಚಕ ರವೀಂದ್ರ ಅಯ್ಯಂಗಾರ್ ರವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ಹಿರಿಯರಾದ ನಾಣು ಬಿಲ್ಲವ ಆರ‍್ಮಾರಹಿತ್ಲು, ಮಾಧವ ಬಿಲ್ಲವ ಶೆಟ್ರಹಿತ್ಲು, ಚಿಕ್ಕು ಪೂಜಾರಿ, ಚಂದ್ರ ಮೊಗೇರ್ ಕರಾವಳಿ, ರಾಮ ಟೈಲರ್, ಸಂಘದ ಗೌರವಾಧ್ಯಕ್ಷ ವಾಸು ಬಿಲ್ಲವ, ಕಾರ್ಯದರ್ಶಿ ಮಹೇಶ್ ಮೊಗೇರ್,ಉದ್ಯಮಿ ಚಿಕ್ಕಯ್ಯ ಬಿಲ್ಲವ ತೆಂಕಮನೆ, ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಜರಿದ್ದರು.

 

Exit mobile version