Kundapra.com ಕುಂದಾಪ್ರ ಡಾಟ್ ಕಾಂ

ನೆರೆಪೀಡಿತ ಪ್ರದೇಶಗಳಿಗೆ ಬೈಂದೂರು ಶಾಸಕರು, ಅಧಿಕಾರಿಗಳ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ನಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಡಾಕೆರೆ, ಚಿಕ್ಕಳ್ಳಿ ಮತ್ತು ಪಡುಕೋಣೆ ಭಾಗದಲ್ಲಿ ಮಳೆಯಿಂದ ಭತ್ತದ ಕೃಷಿಯ ಗದ್ದೆ ಪ್ರದೇಶಗಳು ಸಂಪೂರ್ಣ ಜಲಾವೃತ ಗೊಂಡಿದ್ದು, ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಭೇಟಿ ನೀಡಿದರು.

ಬಂಟ್ವಾಡಿ ಡ್ಯಾಂ ಹಾಗೂ ಮೊವಾಡಿ ಸೇತುವೆಗಳ ಅಪೂರ್ಣ ಕಾಮಗಾರಿಗಳಿಂದಾಗಿ ಈ ಅನಾಹುತ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದು, ಕೂಡಲೇ ಸಣ್ಣ ನೀರಾವರಿ ಎಂಜಿನಿಯರ್‌ ಹಾಗೂ ಪಿಡಬ್ಲ್ಯುಡಿ ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಸಿದ ಶಾಸಕರು ಜನಸಾಮಾನ್ಯರಿಗೆ ತೊಂದರೆ ಯಾಗದಂತೆ, ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪಂಚಾಯತ್‌ ಸದಸ್ಯರಾದ ಶ್ರೀಧರ್‌ ದೇವಾಡಿಗ, ದಿನೇಶ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಗೋಪಾಲಕೃಷ್ಣ ನಾಡ ಉಪಸ್ಥಿತರಿದ್ದರು.

 

Exit mobile version