Site icon Kundapra.com ಕುಂದಾಪ್ರ ಡಾಟ್ ಕಾಂ

ಸ್ವಚ್ಛ್ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಪ್ರೋಗ್ರಾಂ ಆಯ್ದುಕೊಂಡ ಕೊಲ್ಲೂರು ಮಹಿಳಾ ಮಂಡಲ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಸ್ವಚ್ಛ್ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಪ್ರೋಗ್ರಾಂ ಯೋಜನೆಯಲ್ಲಿ ತಮ್ಮದೇ ಆಗಿರುವ ಕೊಡುಗೆ ನೀಡಲು ಕೊಲ್ಲೂರು ಮಹಿಳಾ ಮಂಡಲದ ಆಸಕ್ತ ಮಹಿಳಾ ಸದಸ್ಯರು ಮುಂದೆ ಬಂದಿದ್ದಾರೆ.

ಪ್ರತಿದಿನ4-5 ಗಂಟೆ ಸ್ವಚ್ಛತಾ ಅಭಿಯಾನಕ್ಕಾಗಿ ಮೀಸಲಿಟ್ಟಿರುವ ಮಹಿಳೆಯರು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಹಾಗೂ ಮೈದಾನವನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ನಿಗದಿತ ಸಮಯದಲ್ಲಿ ಸ್ವಚ್ಛ್ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಪ್ರೋಗ್ರಾಂನಡಿ ಕೇಂದ್ರ ಸರ್ಕಾರ ನೀಡುವ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಬೇಕೆಂಬ ನೆಲೆಯಲ್ಲಿ ನಾವೆಲ್ಲರೂ ಒಂದಾಗಿ ಪ್ರಯತ್ನಿಸಲಿದ್ದೇವೆ. ನಮ್ಮ ಮನೆಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಒಂದಿಷ್ಟು ಸಮಯವನ್ನು ಇದಕ್ಕಾಗಿ ಮೀಸಲಿರಿಸಿದ್ದು, ಜುಲೈ31ರ ಒಳಗೆ ನೂರು ಗಂಟೆ ಕೆಲಸ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸಂಘದ ಅಧ್ಯಕ್ಷೆ ಪ್ರಸನ್ನಾ ಶರ್ಮ ಹಾಗೂ ಕಾರ್ಯದರ್ಶಿ ಲತಾ ಶೆಟ್ಟಿ ತಿಳಿಸಿದರು.

 

Exit mobile version