ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಕಿಂಡರ್ ಗಾರ್ಟನ್ ವಿಭಾಗದಲ್ಲಿ ಬಣ್ಣಗಳಲ್ಲಿ ರಂಗಾದ ಕೆಂಪು ಬಣ್ಣದ ದಿನವನ್ನು ಪುಟಾಣಿಗಳು ವಿಶೇಷವಾಗಿ ಆಚರಿಸಿದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಪುಟಾಣಿಗಳಿಗೆ ಬಣ್ಣವನ್ನು ಪರಿಚಯಿಸುವುದು. ಸಾಮಾನ್ಯವಾಗಿ ಮಕ್ಕಳು ಆಕರ್ಷಿತರಾಗುವುದು ಬಣ್ಣದಿಂದ ಹಾಗಾಗೀ ಪುಟಾಣಿಗಳಿಗೆ ಮೊದಲು ಬಣ್ಣಗಳನ್ನು ಪರಿಚಯಿಸಿ ನಂತರ ಇತರ ವಿಷಯಗಳನ್ನು ತಿಳಿಸುವುದು ಉತ್ತಮ ಕಲಿಕೆ ಎಂಬುದು ನಮ್ಮ ಅನಿಸಿಕೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪುಟಾಣಿಗಳೆಲ್ಲರೂ ಕೆಂಪು ಬಣ್ಣದ ಉಡುಗೆ ತೊಟ್ಟು ಶಾಲೆಗೆ ಹಾಜರಾದರು ಜೊತೆಗೆ ಪ್ರತಿ ತರಗತಿ ಕೋಣೆಯಲ್ಲಿ ಕೂಡ ಕೆಂಪು ಬಣ್ಣದ ವಿವಿಧ ಅಲಂಕಾರಿಕ ವಸ್ತುಗಳು ಬಲೂನ್, ಆಟಿಕೆಗಳು, ಹಣ್ಣುಗಳ ಹಾಗೂ ವಿವಿಧ ರೀತಿಯ ನಕ್ಷೆಗಳು ತರಗತಿ ಕೋಣೆಯಲ್ಲಿ ರಾರಾಜಿಸುತ್ತಿದ್ದವು ಮತ್ತು ಶಿಕ್ಷಕಿಯರು ಕೆಂಪು ಬಣ್ಣದ ಸೀರೆ ಉಟ್ಟು ಪುಟಾಣಿಗಳ ಜೊತೆ ಸೇರಿ ವೃತ್ತದ ಸಮಯದಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಿ ಹಾಡಿ ಕುಣಿದರು. ಪುಟಾಣಿಗಳು ವಿವಿಧ ಚಿತ್ರಗಳಿಗೆ ಕೆಂಪು ಬಣ್ಣವನ್ನು ತುಂಬಿ ಆನಂದಿಸಿದರು. ಶಿಕ್ಷಕಿಯರು ಪುಟಾಣಿಗಳಿಗೆ ಬ್ರೆಡ್‌ಗೆ ಕೆಂಪು ಬಣ್ಣದ ಜಾಮ್ ಹಚ್ಚಿ ತಿನ್ನಿಸಿದರು. ಕೊನೆಯಲ್ಲಿ ಪುಟಾಣಿಗಳ ಕೈಗೆ ಕೆಂಪು ಬಣ್ಣದ ನೈಲ್ ಫಾಲಿಶ್ ಹಚ್ಚುವ ಮೂಲಕ ಕೆಂಪು ದಿನಕ್ಕೆ ಸಂಪೂರ್ಣ ಅರ್ಥ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಹಕರಾದ ಅನುಪಮ.ಎಸ್.ಶೆಟ್ಟಿ, ಶಾಲಾ ಪ್ರಾಂಶುಪಾಲರಾದ ಅರವಿಂದ.ವಿ.ಮರಳಿ ಹಾಗೂ ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ ಉಪಸ್ಥಿತರಿದ್ದರು.