Kundapra.com ಕುಂದಾಪ್ರ ಡಾಟ್ ಕಾಂ

ಡಾ.ಹೆಚ್.ವಿ ನರಸಿಂಹ ಮೂರ್ತಿಯವರಿಗೆ ಶೃದ್ಧಾಂಜಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ನಿಧನರಾದ ಡಾ.ಹೆಚ್.ವಿ ನರಸಿಂಹ ಮೂರ್ತಿಯವರು ಪ್ರಕಟಿಸಿದ  ಬರಹಗಳ ಪುಸ್ತಕ ಪ್ರದರ್ಶನ ಮತ್ತು ಅವರಿಗೆ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕರಾದ ಆನಂದ ಅವರು ಮಾತನಾಡಿ ನರಸಿಂಹಮೂರ್ತಿಗಳು ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಆದರೆ ಇದಕ್ಕಿಂತ ಹೆಚ್ಚಾಗಿ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕವಾಗಿ ಕಾಲೇಜು ಗುರುತಿಸಿಕೊಳ್ಳುವಲ್ಲಿ ಅವರ ಸೇವೆ ಅಪಾರ ,ಅನನ್ಯ ಮತ್ತು ಅಜರಾಮರವಾದುದು. ಅವರು ಸಂಪಾದಕರಾಗಿದ್ದ ದರ್ಶನ ವಾರ್ಷಿಕ ಸಂಚಿಕೆ, ಆಧ್ಯಾತ್ಮಿ ಶಿಬಿರ, ಅಧ್ಯಾಪಕರ ಸಂಘ ಎನ್.ಎಸ್.ಎಸ್. ಹೀಗೆ ಹತ್ತು ಹಲವು ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದು ಹೇಳಿದರು.

ಕುಂದಾಪುರದ ಕುಂದೇಶ್ವರ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ದೇವಾಲಯವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದವರು. ಅವರ ಸುಮಾರು 88 ಕೃತಿಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ ಮುಖ್ಯಸ್ಥರಾದ ಡಾ.ಯಶವಂತಿಕೆ., ಕಾಲೇಜಿನ ಮ್ಯಾನೇಜರ್ ಶೋಭಾ, ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರಫುಲ್ಲ ಪದ್ಮಶಾಲಿ, ಸಂಸ್ಕೃತ ವಿಭಾಗದ ಅಧ್ಯಾಪಕರಾದ ಗಾಯತ್ರಿ ಸುವರ್ಣ, ಇತಿಹಾಸ ವಿಭಾಗದ ಸ್ನೇಹಾ ಎಸ್, ರಾಜ್ಯಶಾಸ್ತ್ರ ವಿಭಾಗದ ಹರ್ಷಿತಾ ಉಪಸ್ಥಿತರಿದ್ದರು.

 

Exit mobile version