Site icon Kundapra.com ಕುಂದಾಪ್ರ ಡಾಟ್ ಕಾಂ

ಸಮಾಜ ಸೇವಾ ರತ್ನ ಪ್ರಶಸ್ತಿಗೆ ವಾಸುದೇವ ಬಿ. ದೇವಾಡಿಗ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು ಹಾಗೂ ಆಲ್ ಇಂಡಿಯಾ ಕಲ್ಚರ್ & ಹೆರಿಟೇಜ್ ಡೆವಲಪ್‌ಮೆಂಟ್ ಸೆಂಟರ್ ನ್ಯೂ ಡೆಲ್ಲಿ ಸಹಯೋಗದೊಂದಿಗೆ ಕೊಡಲ್ಪಡುವ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಬೈಂದೂರಿನ ವಾಸುದೇವ ಬಿ.ದೇವಾಡಿಗ ಆಯ್ಕೆಯಾಗಿದ್ದಾರೆ

ಮಾತೃಶ್ರೀ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್, ಮಾತೃಶ್ರೀ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಹಾಗೂ ಮಾತೃಶ್ರೀ ಶೈಕ್ಷಣಿಕ ಸಾಮಾಜಿಕ ಸೇವಾ ಸಂಸ್ಥೆ ಬೈಂದೂರು, ಕುಂದಾಪುರ ಇದರ ಸ್ಥಾಪಕರಾದ ವಾಸುದೇವ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾಂ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿಯೂ ಇವರ ಸೇವಾ ಕಾರ್ಯ ನಿರಂತರವಾಗಿದೆ.

Exit mobile version