Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರಕ್ಕೆ ಶಾಶ್ವತ ಸಂಚಾರಿ ನಿಯಮ ರೂಪಿಸಬೇಕಿದೆ: ಸರ್ಕಲ್ ಇನ್ಸ್‌ಫೆಕ್ಟರ್ ಮಂಜಪ್ಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಬೆಳೆಯುತ್ತಿರುವ ಪಟ್ಟಣವಾಗಿದ್ದು ವಾಹನಗಳ ಸಂಖ್ಯೆ ಏರುತ್ತಲಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆ ಅಗಲಕಿರಿದಾದುರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತದೆ. ಒಳ ರಸ್ತೆಗಳಲ್ಲೂ ಸಮಸ್ಯೆಗಳಿವೆ. ವಾಹನ ಚಾಲಕರೂ ರಸ್ತೆ ನಿಯಮಗಳನ್ನು ಪಾಲಿಸದಿದ್ದರೆ ಅವಘಡಗಳೂ ಉಂಟಾಗುತ್ತದೆ. ಒಂದು ಶಾಶ್ವತ ಸಂಚಾರಿ ನಿಯಮ ಕುಂದಾಪುರದಲ್ಲಿ ರೂಪಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಇಲಾಖೆಯವರೆಲ್ಲಾ ಸೇರಿ ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಸೇರಿ ಚರ್ಚಿಸಿ ಒಂದು ನಿಯಮ ರೂಪಿಸಬಹುದು” ಎಂದು ಕುಂದಾಪುರ ವಲಯದ ವೃತ್ತ ನಿರೀಕ್ಷಕ ಡಿ.ಆರ್. ಮಂಜಪ್ಪ ಹೇಳಿದರು.

ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ಮೇಕ್ ರೋಡ್ ಸೇಫ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಹೇಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕೆ ಅಪಘಾತಗಳಾಗುತ್ತವೆ. ಚಾಲಕರು ಯಾವ ರೀತಿ ನಿಯಮಗಳನ್ನು ಪಾಲಿಸದೇ ನಿರ್ಲಕ್ಷದಿಂದ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣರಾಗುತ್ತಾರೆ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ ಅವರು ವಾಹನ ಚಲಾವಣೆಯಲ್ಲಿ ಮೊಬೈಲ್ ಬಳಕೆ ಅಪಾಯಕಾರಿ, ಮನೆಯಲ್ಲಿ ತಮ್ಮನ್ನು ನಂಬಿದ ಒಡಹುಟ್ಟಿದವರು ಪತ್ನಿ, ಮಕ್ಕಳು ಹೆತ್ತವರು ಇದ್ದಾರೆ ಎಂಬ ನೆನಪು ಇರಬೇಕು. ಕ್ಷಣದ ನಿರ್ಲಕ್ಷ ಎರಡು ಸಂಸಾರದ ನೌಕೆಯನ್ನು ಅಲ್ಲೋಲಕಲ್ಲೋಲ ಮಾಡಬಹುದು. ಅಮಾಯಕರೂ ಬಲಿಯಾಗಬಹುದು ಎಂದು ಅವರು ಹೇಳಿದರು.

ದ್ವಿಚಕ್ರವಾಹನ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದ್ದು, ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ ಅವರು ರೋಟರಿ ಕುಂದಾಪುರ ದಕ್ಷಿಣ ರಸ್ತೆ ಸುರಕ್ಷತೆ ಬಗ್ಗೆ ಕೈಗೊಳ್ಳುವ ಯಾವುದೇ ಯೋಜನೆಗೂ ನಮ್ಮ ಸಹಕಾರವಿದೆ ಎಂದರು.

ಮಾಜಿ ಜಿಲ್ಲಾ ಗವರ್ನರ್ ಸದಾನಂದ ಚಾತ್ರ, ಶ್ರೀನಾಥ್ ರಾವ್, ಅನಿಲ್ ಚಾತ್ರ, ಮನೋಹರ ಭಟ್, ಜಿ.ಸಂತೋಷ್ ಕುಮಾರ್ ಶೆಟ್ಟಿ, ವಿಜಯ್ ಶೆಟ್ಟಿ , ಶ್ರೀಧರ ಶೆಟ್ಟಿ, ಕೆ.ಶಾಂತಾರಾಮ ಪ್ರಭು, ಓಝಲಿನ್ ರೆಬೆಲ್ಲೋ, ಸತೀಶ ಶೆಟ್ಟಿ ಹಾಗೂ ಹಲವಾರು ಸಂವಾದದಲ್ಲಿ ಪಾಲ್ಗೊಂಡರು.

ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಸರ್ಕಲ್ ಇನ್ಸ್‌ಫೆಕ್ಟರ್ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಯಿಂದ ಆಗುತ್ತಿರುವ ಅನಾಹುತ ನವಯುಗ ಕಂಪೆನಿ ಅಧಿಕಾರಿಗಳಿಗೆ ತಿಳಿಸಿ ನೋಟೀಸ್ ನೀಡಿದ್ದೇವೆ. ಅನಾಹುತಗಳಿಗೆ ನೀವೇ ಕಾರಣವೆಂದು ದೂರು ದಾಖಲಿಸುತ್ತೇವೆ” ಎಂದು ಎಚ್ಚರಿಸಲಾಗಿದೆ ಎಂದರು. ಸಂಚಾರಿ ಪೋಲೀಸ್ ವಿಭಾಗದ ಉಪ ನಿರೀಕ್ಷಕ ರತ್ನಾಕರ ಉಪಸ್ಥಿತರಿದ್ದರು.

ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಜೊನ್ಸನ್ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಮಪ್ರಸಾದ ಶೇಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜುಡಿತ ಮೆಂಡೋನ್ಸಾ ಅನಿಸಿಕೆಯನ್ನು ತಿಳಿಸಿದರು. ಸುರೇಶ ಮಲ್ಯ ವಂದಿಸಿದರು.

Exit mobile version