Kundapra.com ಕುಂದಾಪ್ರ ಡಾಟ್ ಕಾಂ

ಕತ್ತಲೆಕೋಣೆ ಸಿನೆಮಾಗೆ ಕುಂದಾಪುರ, ಬೈಂದೂರಿನಲ್ಲಿ ಅದ್ದೂರಿ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದಲ್ಲಿ ನೂರಾರು ಯುವ ಹಾಗೂ ಸೃಜನಶೀಲ ಮನಸ್ಸುಗಳಿದ್ದು, ಸಿನೆಮಾ ರಂಗದಲ್ಲಿಯೂ ಖ್ಯಾತಿ ಪಡೆದಿದ್ದಾರೆ. ಇತ್ತಿಚಿನ ದಿನಗಳಲ್ಲಿ ಕುಂದಾಪುರ ಹಾಗೂ ಕರಾವಳಿಗರ ಸಿನೆಮಾಗಳು ಹೆಚ್ಚು ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹಿರಿಯ ಸಾಹಿತಿ, ನ್ಯಾಯವಾದಿ ಎಎಸ್‌ಎನ್ ಹೆಬ್ಬಾರ್ ಹೇಳಿದರು.

ಅವರು ಶುಕ್ರವಾರ ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ತೆರೆಕಂಡ ಕತ್ತಲೆಕೋಣೆ ಸಿನೆಮಾ ಬಿಡುಗಡೆಗೂ ಮುನ್ನ ಚಿತ್ರತಂಡಕ್ಕೆ ಶುಭ ಹಾರೈಸಿ ಮಾತನಾಡಿದರು.

ಕುಂದಾಪುರದ ಕ್ರೀಯಾಶೀಲ ಯುವಕರ ತಂಡ ನಿರ್ಮಿಸಿರುವ ಕತ್ತಲೆಕೋಣೆ ಇಂದು ರಾಜ್ಯದ 120 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಚಿತ್ರದ ಕಥಾವಸ್ತು ಹಾಗೂ ಭಿನ್ನ ಶೈಲಿಯ ನಿರ್ದೇಶಕ ಚಿತ್ರರಸಿಕರ ಮನಗೆಲ್ಲಲಿದೆ ಎಂದರು.

ಈ ಸಂದರ್ಭ ಕತ್ತಲೆಕೋಣೆ ಚಿತ್ರದ ನಿರ್ದೇಶಕ, ನಟ ಸಂದೇಶ್ ಶೆಟ್ಟಿ ಆಜ್ರಿ, ನಿರ್ಮಾಪಕರಾದ ಪಿ.ಆರ್ ಅಮೀನ್ ಮುಂಬೈ, ನಟರಾದ ಓಂಗುರು ಬಸ್ರೂರು, ಚಂದ್ರಶೇಖರ ಬಸ್ರೂರು, ಚಿತ್ರತಂಡದ ಅಶ್ವಥ್ ಆಚಾರ್ಯ, ಮಂಜುನಾಥ ಸಾಲ್ಯಾನ್, ರಿತಿಕ್ ಮುರ್ಡೇಶ್ವರ್, ರೋಹಿತ್ ಅಂಪಾರು, ಶ್ರೀನಿವಾಸ್ ಪೈ, ಭಾಸ್ಕರ್ ಶೆಟ್ಟಿ ನೇರಳಕಟ್ಟೆ, ವೈಶಾಖ್ ಅಮೀನ್, ಕ್ಯಾಮರಾಮ್ಯಾನ್ ಆರ್.ಕೆ. ಮಂಗಳೂರು, ಸಿದ್ಧಾರ್ಥ್ ನೀಲಾವರ, ಸತ್ಯನಾರಾಯಣ ಬಸ್ರೂರು, ಉಷಾ ಸಂದೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರಿನ ಶಂಕರ ಚಿತ್ರ ಮಂದಿರದಲ್ಲಿ ಚಲನಚಿತ್ರ ನಟ ಓಂ ಗಣೇಶ್ ಉಪ್ಪುಂದ ಅವರು ಉದ್ಘಾಟಸಿದರು. ಈ ಸಂದರ್ಭದಲ್ಲಿ ಲಾವಣ್ಯ ರಿ ಬೈಂದೂರು ಇದರ ಅಧ್ಯಕ್ಷ ಗಿರೀಶ್ ಬೈಂದೂರು, ಕತ್ತಲೆಕೋಣೆಯ ಸಹಾಯಕ ನಿರ್ದೇಶಕ ಸುನಿಲ್ ಉಪ್ಪುಂದ ಹಾಗೂ ಕಲಾವಿದರು ಉಪಸ್ಥಿತರಿದ್ದರು.

Exit mobile version