Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಮಲ್ಯರಮಠದಲ್ಲಿ ಅಖಂಡ ಭಜನಾ ಸಪ್ತಾಹ ಮಹೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಅಖಂಡ ಭಜನಾ ಸಪ್ತಾಹ ಮಹೋತ್ಸವ ಆ.೧೬ರಂದು ಆರಂಭಗೊಂಡಿದ್ದು ಆ.೨೩ರವರೆಗೆ ನಡೆಯಲಿದೆ.

ಬೆಳಿಗ್ಗೆ ದೀಪ ಸ್ಥಾಪನಾಪೂರ್ವಕ ಅಖಂಡ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ಹಾಗೂ ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವೇದಮೂರ್ತಿ ಎಸ್.ಶ್ರೀಧರ ಆಚಾರ್ಯ, ವೇದಮೂರ್ತಿ ಎಸ್.ರಾಮನಾಥ ಆಚಾರ್ಯ, ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್, ಕೆ.ಪದ್ಮನಾಭ ನಾಯಕ್, ಡಾ.ಕಾಶೀನಾಥ ಪೈ, ಜಿ.ನಿತ್ಯಾನಂದ ಶೆಣೈ, ಎಂ.ವಿನೋದ ಪೈ, ಎಂ.ವಾಮನ ಪೈ, ಎನ್. ಕೃಷ್ಣಾನಂದ ನಾಯಕ್, ಬಿ.ಕೃಷ್ಟ್ರಾಯ ಪೈ, ಎಚ್.ಸಂಜೀವ ನಾಯಕ್, ಎನ್.ತಿಮ್ಮಪ್ಪ ನಾಯಕ್, ಎನ್.ಗಜಾನನ ನಾಯಕ್, ಯು.ಸದಾನಂದ ಪೈ, ಯು.ನಾರಾಯಣ ಪೈ, ಮೋಹನದಾಸ ಭಂಡಾರ್‌ಕಾರ್, ಜಿಎಸ್‌ಬಿ ಮಹಿಳಾ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಅಖಂಡ ಭಜನಾ ಸಪ್ತಾಹ ಮಹೋತ್ಸವವು ಆ.೨೩ರಂದು ದೀಪ ವಿಸರ್ಜನೆಯೊಂದಿಗೆ ಸಂಪನ್ನಗೊಳ್ಳಲಿದೆ. ಆ.೨೨ರಂದು ಸಂಜೆ ೫ ಗಂಟೆಗೆ ನಗರ ಭಜನೆ, ರಾತ್ರಿ ವಿಶೇಷ ಪೂಜೆ, ಅಖಂಡ ಭಜನಾ ಸಪ್ತಾಹ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ವಿಶೇಷ ಪೂಜೆ, ಪುನಸ್ಕಾರಗಳು ನಡೆಯಲಿದೆ. ಊರ ಪರ ಊರುಗಳಿಂದ ಆಗಮಿಸುವ ಭಜನಾ ತಂಡಗಳು, ಭಜಕರು ಶ್ರೀದೇವರಿಗೆ ಭಜನಾ ಸೇವೆ ಸಮರ್ಪಿಸಲಿದ್ದಾರೆ.

Exit mobile version