Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳದಿಂದ ಕೇರಳಕ್ಕೆ 1 ಕೋಟಿ, ಕೊಡಗು ಜಿಲ್ಲೆಗೆ 25 ಲಕ್ಷ ರೂ. ಪರಿಹಾರ ಘೋಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಕೊಲ್ಲೂರಿನ ಮೂಕಾಂಬಿಕ ದೇವಾಲಯದ ಆಡಳಿತ ಮಂಡಳಿ ಕೊಡಗು ಮತ್ತು ಕೇರಳ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಅರ್ಪಿಸಿದೆ. ಕೇರಳಕ್ಕೆ 1 ಕೋಟಿ, ಕೊಡಗು ಜಿಲ್ಲೆಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಭೆ ನಡೆಯಿತು. ಕೇರಳ ಮತ್ತು ಕೊಡಗಿನ ಪ್ರವಾಹ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೇರಳ ಮತ್ತು ಕೊಡಗಿನಲ್ಲಿ ಪ್ರವಾಹ ಕಡಿಮೆ ಆಗಲಿ ಎಂದು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನದ ನಿಧಿಯಿಂದ ಕೇರಳ ರಾಜ್ಯಕ್ಕೆ 1 ಕೋಟಿ, ಕೊಡಗು ಜಿಲ್ಲೆಗೆ 25 ಲಕ್ಷ ರೂ. ಬಿಡುಗಡೆಗೆ ಮಂಜೂರಾತಿ ಕೋರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕೊಲ್ಲೂರಿನ ಮೂಕಾಂಬಿಕ ದೇವಾಲಯಕ್ಕೆ ಕರ್ನಾಟಕದ ಜೊತೆಗೆ ಕೇರಳದಲ್ಲೂ ಲಕ್ಷಾಂತರ ಭಕ್ತರಿದ್ದಾರೆ. ಕೇರಳದ ನೂರಾರು ಭಕ್ತರು ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ, ಕೇರಳಕ್ಕೂ ಪರಿಹಾರ ಘೋಷಣೆ ಮಾಡಲಾಗಿದೆ.

 

Exit mobile version