Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‍ಗೆ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ನೆನ್ನೆ ಚೆನೈನ ಎಸ್‍ಆರ್‍ಎಂ ವಿಶ್ವ ವಿದ್ಯಾನಿಲಯದಲ್ಲಿ ಮುಕ್ತಾಯಗೊಂಡ ಎಸ್‍ಆರ್‍ಎಂ ಸ್ಥಾಪಕ ಮಹೋತ್ಸವ ಅಖಿಲ ಭಾರತಅಂತರ್ ಕಾಲೇಜು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ರಾಷ್ಟ್ರದ 16 ಆಹ್ವಾನಿತ ತಂಡಗಳು ಭಾಗವಹಿಸಿದ್ದು, ಟೂರ್ನಿಯ ಕ್ವಾರ್ಟರ್ ಫೈನಲ್‍ನಲ್ಲಿ ಕ್ರೆಸೆಂಟ್ ವಿಶ್ವ ವಿದ್ಯಾನಿಲಯವನ್ನು ನೇರ ಸೆಟ್‍ಗಳಿಂದ ಸೋಲಿಸಿ ಲೀಗ್ ಹಂತಕ್ಕೆ ಪ್ರವೇಶಿಸಿತು. ಸೂಪರ್ ಲೀಗ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಕೊಯಂಬತೂರಿನ ನಿರ್ಮಲ ತಂಡ ಹಾಗೂ ಅತಿಥೇಯs ಎಸ್‍ಆರ್‍ಎಂ ವಿಶ್ವ ವಿದ್ಯಾನಿಲಯವನ್ನು ನೇರಸೆಟ್‍ಗಳಿಂದ ಸೋಲಿಸಿದ್ದಲ್ಲದೆ, ಅಂತಿಮ ನಿರ್ಣಾಯಕ ಪಂದ್ಯದಲ್ಲಿ ದಿಂಡಿಗಲ್‍ನ  ಓಂ ಇಸ್ಟಿಟ್ಯೂಟ್ ತಂಡವನ್ನು 35-27 ಹಾಗೂ 35-22 ನೇರ ಸೆಟ್‍ಗಳಿಂದ ಸೋಲಿಸಿ 6ನೇ ಭಾರಿ ಎಸ್‍ಆರ್‍ಎಂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

Exit mobile version