Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಗ್ರಾಮ ದೇವತೆಗೆ ಮೊದಲ ತಿಂಗಳ ಸಂಬಳ ಅರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉನ್ನತ ವಿದ್ಯಾಭ್ಯಾಸ ಮುಗಿಸಿ ಕೆಲಸ ದೊರೆತ ಬಳಿಕ ಆ ಉದ್ಯೋಗಿಗಳು ತಮಗೆ ಸಿಗುವ ಪ್ರಥಮ ಸಂಬಳ ತಂದೆಗೊ ತಾಯಿಗೊ ನೀಡಿ ಆಶೀರ್ವಾದ ಪಡೆಯುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದರೆ ಸ್ವಾಪ್ಟ್‌ವೆರ್ ಉದ್ಯೋಗಿಯಾಗಿ ತನ್ನ ದುಡಿಮೆಯ ಪ್ರಪ್ರಥಮ ಪ್ರತಿಫಲವನ್ನು ತನ್ನ ಊರಿನ ತಾಯಿ, ಗ್ರಾಮ ದೇವತೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರ್ರಿ ಅಮ್ಮನಿಗೆ ಅರ್ಪಿಸುವ ಮೂಲಕ ಕು. ಶೃದ್ಧಾ ಓಂಗಣೇಶ್ ಕಾಮತ್ ಇವರು ಯುವ ಜನತೆಗೆ ಒಂದು ಪ್ರೇರಣೆಯಾಗಿದ್ದಾರೆ ಎಂದು ಬೈಂದೂರು ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಹೇಳಿದರು.

ದೇವಾಲಯಕ್ಕೆ ಅರ್ಪಿಸಿದ ಇಪ್ಪತ್ತೊಂದು ಸಾವಿರ ರೂಪಾಯಿಯ ಚೆಕ್ಕನ್ನು ಸ್ವೀಕರಿಸಿ ಮಾತನಾಡಿದ ಅವರು ’ಗ್ರಾಮೀಣ ಭಾಗದಿಂದ ನಗರ ಸೇರಿ ವೇಗದ ಒತ್ತಡದ ಬದುಕಿನ ನಡುವೆ ಹುಟ್ಟೂರಿಗೆ ಬಂದು ನಡೆಸುವ ಇಂತಹ ದಾನಗುಣ ಆರೋಗ್ಯವನ್ನೂ ನೆಮ್ಮದಿಯನ್ನೂ ತರುವುದಲ್ಲದೆ ತನ್ಮೂಲಕ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನೂ ಪಡೆಯಲು ಸಾಧ್ಯವಾಗುತ್ತದೆ ಈ ಗ್ರಾಮ ದೇವತೆ ಸರ್ವರಿಗೂ ಕರುಣಿಸಿಸಲಿ’ ಎಂದರು.

ಇದೆ ಸಂದರ್ಭದಲ್ಲಿ ಕು. ಶೃದ್ಧಾ ಓಂಗಣೇಶ್ ಕಾಮತ್ ಇವರನ್ನು ದೇವಾಲಯದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಶೃದ್ಧಾರವರ ತಂದೆ ಜಾದೂಗರ ಓಂಗಣೇಶ್ ಕಾಮತ್ ತಾಯಿ ವಿಜಯಾ ಗಣೇಶ್ ಕಾಮತ್ ಜತೆಗಿದ್ದರು. ಅರ್ಚಕ ಶಂಕರನಾರಾಯಣ ಪುರಾಣಿಕ್ ಹಾಗೂ ರಮೇಶ್ ಉಡುಪ ಪ್ರಾರ್ಥಿಸಿ ಹಾರೈಸಿದರು. ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಜಯರಾಮ್ ಶೆಟ್ಟಿ, ಮ್ಯಾನೇಜರ್ ಸುರೇಶ್ ಭಟ್, ಆಫೀಸು ನಿರ್ವಾಹಕ ಗಣೇಶ್ ಆರ್ ಡಿ ಉಪಸ್ಥಿತರಿದ್ದರು. ಆರ್ಚಕ ಹಾಗು ಗ್ರಾಮ ಪಂಚಾಯತ್ ಸದಸ್ಯ ಸಂದೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version