Site icon Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ಸಂಸ್ಥೆಗೆ ಗೆತೈವಾನ್ ಕಲಾವಿದರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸುರಭಿ ಕಲಾ ಸಂಸ್ಥೆಯ ರಂಗಸುರಭಿಯ 3 ದಿನಗಳ ರಂಗತರಬೇತಿ ಶಿಬಿರಕ್ಕೆ ತೈವಾನ್ ದೇಶದ ನಿವೃತ್ತ ಅಧ್ಯಾಪಕ ಹಾಗೂ ಕಲಾವಿದ ಆದ ಚಿನ್‌ಲಂಗ್ ಮತ್ತು ಪಿಯಿಯಾ ಸೌಹಾರ್ದಯುತ ಭೇಟಿ ನೀಡಿದರು.

ಕೆಲ ಹೊತ್ತು ರಂಗಕಲೆಯನ್ನು ವೀಕ್ಷಿಸಿ ಭಾರತದ ರಂಗಭೂಮಿ ಮತ್ತು ನಾಟಕದ ಬಗ್ಗೆ ಚರ್ಚಿಸಿದರು. ಅಲ್ಲದೆ ಅವರೂ ಮುಟ್ಟಾಳೆಗಳನ್ನು ಧರಿಸಿ ವಾದ್ಯದತಾಳಕ್ಕೆ ಲಯಬದ್ಧವಾಗಿ ನರ್ತಿಸಿ ಸುರಭಿ ತಂಡಕ್ಕೆ ಶುಭ ಹಾರೈಸುತ್ತಾ ತೈವಾನ್ ದೇಶಕ್ಕೆ ಸುರಭಿಯ ಕಲಾವಿದರಿಗೆ ಆಹ್ವಾನಿಸುವುದಾಗಿ ಭರವಸೆ ನೀಡಿದರು.

ಸುರಭಿಯ ವ್ಯವಸ್ಥಾಪಕ ಕೃಷ್ಣಮೂರ್ತಿಉಡುಪ ಸ್ವಾಗತಿಸಿದರು. ಕಲಾವಿದೆ ಕೀರ್ತಿ ಭಟ್ ಮಾಲಾರ್ಪಣೆ ಮಾಡಿದರು. ಕಾರ್ಯದರ್ಶಿ ವೈ. ಲಕ್ಷ್ಮಣ್ ಕೊರಗ ವಂದಿಸಿದರು. ನಿರ್ದೇಶಕ ಗಣೇಶ್ ಮುಂಡಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸುಧಾಕರ್ ಪಿ. ಬೈಂದೂರು ನಿರೂಪಿಸಿದರು,

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಸತ್ಯನಾಕೋಡೇರಿ ಕೊಳಲು ನುಡಿಸಿ ಯೋಗೇಶ್ ಬಂಕೇಶ್ವರ ಕಂಜರ, ಲಕ್ಷ್ಮಣ್ ಕೊರಗ ಡೋಲಕ್ ಹಾಗೂ ಗಣೇಶ್ ಮುಂಡಾಡಿ ಡ್ರಮ್ಸ್ ನುಡಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸುರಭಿ ಕಲಾವಿದರು ನೃತ್ಯದಲ್ಲಿ ಸಾಥ್ ನೀಡಿದರು ಈ ಸಂದರ್ಭದಲ್ಲಿ ಅವರೊಂದಿಗೆ ಪ್ರಕಾಶ್ ಭಟ್ ಮತ್ತು ಡಾ. ಶೋಭಿತಾ ಉಪಸ್ಥಿತರಿದ್ದರು.

Exit mobile version