ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರ ಸ್ಥಳೀಯ ಸಂಸ್ಥೆ ಚುನಾವಣೆ-2018ಕ್ಕೆ ಸಂಬಂದಪಟ್ಟಂತೆ ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು.
ಕುಂದಾಪುರ ಪುರಸಭೆಯಲ್ಲಿ 68% ಮತದಾನವಾಗಿದೆ. ಫೆರಿ ರಸ್ತೆ ವಾರ್ಡ್ 71.74, ಮದ್ದುಗುಡ್ಡೆ ವಾರ್ಡ್ 80.56, ಈಸ್ಟ್ ಬ್ಲಾಕ್ ವಾರ್ಡ್ 74.79, ಖಾರ್ವಿಕೇರಿ ವಾರ್ಡ್ 82.37, ಬಹದ್ದೂರ್ ಶಾ ವಾರ್ಡ್ 74.11, ಚಿಕ್ಕನಸಾಲು ಎಡಬದಿ ವಾರ್ಡ್ 73.09, ಮೀನು ಮಾರ್ಕೆಟ್ ವಾರ್ಡ್ 73.04, ಚಿಕ್ಕನಸಾಲು ಬಲಬದಿ ವಾರ್ಡ್ 76.33, ಸರಕಾರಿ ಆಸ್ಪತ್ರೆ ವಾರ್ಡ್ 70.81, ಚರ್ಚ್ ರೋಡ್ ವಾರ್ಡ್ 67.35, ಸೆಂಟ್ರಲ್ ವಾರ್ಡ್ 73.72, ವೆಸ್ಟ್ ಬ್ಲಾಕ್ ವಾರ್ಡ್ 71.26, ಮಂಗಳೂರು ಟೈಲ್ಸ್ ವಾರ್ಡ್ 76.03, ಕೋಡಿ ದಕ್ಷಿಣ ವಾರ್ಡ್ 73.73, ಕೋಡಿ ಮಧ್ಯ ವಾರ್ಡ್ 69.70, ಕೋಡಿ ಉತ್ತರ ವಾರ್ಡ್ 77.90, ಟಿ.ಟಿ.ರೋಡ್ ವಾರ್ಡ್ 77.85, ನಾನಾ ಸಾಹೇಬ್ ವಾರ್ಡ್ 68.73, ಜೆ.ಎಲ್.ಬಿ ವಾರ್ಡ್ 66.18, ಕುಂದೇಶ್ವರ ವಾರ್ಡ್ 71.02, ಹುಂಚಾರ ಬೆಟ್ಟು ವಾರ್ಡ್ 74.78, ಶಾಂತಿನಿಕೇತನ ವಾರ್ಡ್ 75.65, ಕಲ್ಲಾಗರ ವಾರ್ಡ್ 77.12 ಮತದಾನವಾಗಿದೆ.
ವೃದ್ದರು, ವಿಶೇಷ ಚೇತನರು, ಅನಾರೋಗ್ಯ ಪೀಡಿತರು ಸಹಾಯಕರ ನೆರವಿನಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಕುಂದಾಪುರದ ಸರಕಾರಿ ಆಸ್ಪತ್ರೆ ವಾರ್ಡ್ನ ರಘುನಾಥ ರಾವ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ಅನಾರೋಗ್ಯ ಪೀಡಿತ 80ವರ್ಷದ ಸಿದು ಮೊಗೇರ್ತಿ ವಾಕರ್ ನೆರವಿನಿಂದ ಬಂದು ಮತ ಚಲಾಯಿಸಿದರು.